ಕೊಡಚಾದ್ರಿ ಕಾಲೇಜಿನಲ್ಲಿ ಪಿಜಿ ಕೋರ್ಸ್ ಆರಂಭ
ಹೊಸನಗರ: ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2014 - 15ನೇ ಸಾಲಿನ ಕನ್ನಡ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗಕ್ಕೆ ಪ್ರವೇಶ ಆರಂಭವಾಗಿದೆ. ಕಾಲೇಜಿನಲ್ಲಿ ಅರ್ಜಿ ಫಾರಂ ಪಡೆದು ಜು.30 ರೊಳಗೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಮಾಹಿತಿಗೆ ಪ್ರಾಂಶುಪಾಲ ಚಂದ್ರಶೇಖರ್ 08185-221360, ಕನ್ನಡ ವಿಭಾಗ ಸಂಯೋಜಕ ಡಾ.ಮಾರ್ಷಲ್ ಶಿವರಾಂ 9448628434, ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಪ್ರೊ. ನಾಗರಾಜ್ 9449943213 ಸಂಪರ್ಕಿಸಲು ಕೋರಲಾಗಿದೆ.