ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗೋವಾ ಕನ್ನಡಿಗರ ರಕ್ಷಣೆಗೆ ಆಗ್ರಹಿಸಿ ಕರವೇ ಪ್ರತಿಭಟನೆ

Rashmi Kasaragodu
Updated On : 19 Jul 2014, 11:16 am

ಶಿವಮೊಗ್ಗ: ಗೋವಾ ಕನ್ನಡಿಗರ ರಕ್ಷಣೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಗೋವಾದಲ್ಲಿ ನೆಲೆಸಿರುವ ಸುಮಾರು 74 ಕನ್ನಡಿಗರ ಮನೆಗಳನ್ನು ಅಲ್ಲಿನ ಸರ್ಕಾರ ನೆಲಸಮ ಮಾಡಿದೆ. ಗೋವಾ ರಾಜ್ಯದ ಕಾನೂನಿಗೆ ಬದ್ಧವಾಗಿ ಇವರು ವಾಸಿಸುತ್ತಿದ್ದರೂ ಗೋವಾ ಸರ್ಕಾರ ಮನೆಗಳನ್ನು ನೆಲಸಮ ಮಾಡಿ ಸಂತ್ರಸ್ತರನ್ನಾಗಿ ಮಾಡಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
 ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿರುವ ಗೋವಾ ಸರ್ಕಾರಕ್ಕೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಬೇಕೆಂದು ಆಗ್ರಹಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾಕ್ಕೆ ತೆರಳಿ ಅಲ್ಲಿನ ಕನ್ನಡಿಗರ ಯೋಗಕ್ಷೇವು ವಿಚಾರಿಸಿ ಪುನರ್ ವಸತಿ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರಕ್ಷಣಾ ವೇದಿಕೆಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಪಡುವಳ್ಳಿ ಹರ್ಷೇಂದ್ರಕುಮಾರ್, ಜಿಲ್ಲಾಧ್ಯಕ್ಷ ಎಂ.ಆರ್.ವೆಂಕಟೇಶ್ ಹೆಗಡೆ, ರಾಜೇಂದ್ರ, ಡಿ.ಎಂ.ಮೋಹನ್, ಮಧುಸೂದನ್, ಎಸ್.ಅನಿಲ್ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement