ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ದೇಸೀ ಚಿಂತನೆ ವಿಸ್ತರಿಸುವ ಅಗತ್ಯ: ಪ್ರೊ. ಬೋರಲಿಂಗಯ್ಯ

Rashmi Kasaragodu
Updated On : 20 Jul 2014, 12:55 pm

ಶಿವಮೊಗ್ಗ: ಇವತ್ತಿನ ಪೀಳಿಗೆಗೆ ಅಗತ್ಯವಾದ ಪುಸ್ತಕಗಳನ್ನು ಪ್ರಕಟಿಸಬೇಕು. ಆ ಪುಸ್ತಕಗಳು ಓದುಗರಲ್ಲಿ ಆತ್ಮವಿಶ್ವಾಸ ತುಂಬ ಬೇಕು. ದೇಸಿಯ ಚಿಂತನೆಗಳನ್ನು ವಿಸ್ತರಿಸುವ ತೀವ್ರ ಅಗತ್ಯವಿದೆ ಎಂದು ಕನ್ನಡ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಅಭಿಪ್ರಾಯಪಟ್ಟರು.
ಅವರು ಕುವೆಂಪು ವಿವಿ ದೂರ ಶಿಕ್ಷಣ ನಿರ್ದೇಶನಾಲಯ ಸಭಾಂಗಣದಲ್ಲಿ ಪ್ರಸಾರಾಂಗ ಆಯೋಜಿಸಿದ್ದ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ವಿವಿಧ ಸಂಪಾದಕರ 9 ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಕುಲಸಚಿವ ಪ್ರೊ. ಮಲ್ಲಿಕಾ ಎಸ್ ಘಂಟಿ, ಜನರು ಮತ್ತು ವಿಶ್ವವಿದ್ಯಾಲಯದ ನಡುವಿನ ಕಂದಕವನ್ನು ತೊಡೆಯಬೇಕು. ಪುಸ್ತಕ ಪ್ರೀತಿ ಆಪತ್ತನ್ನು ಎದುರಿಸಲು ಶಕ್ತಿ ನೀಡುತ್ತದೆ. ಎಂದರು. ಕುಲಪತಿ ಪ್ರೊ. ಎಸ್.ಎ. ಬಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಸಾರಾಂಗ ನಿರ್ದೇಶಕ ಪ್ರೊ.ಜಿ. ಪ್ರಶಾಂತ ನಾಯಕ ಮಾತನಾಡಿದರು. ಡಾ. ಹಸೀನಾ ಪ್ರಾರ್ಥಿಸಿದರು. ಡಾ. ಶಿವಾನಂದ ಕೆಳಗಿನಮನಿ ಸ್ವಾಗತಿಸಿದರು. ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ನಿರೂಪಿಸಿದರು.  ಡಾ. ಬಿ.ಇ. ಕುಮಾರಸ್ವಾಮಿ ವಂದಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement