ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿಧವೆ ಮೇಲೆ ಅತ್ಯಾಚಾರ: ಆರೋಪಿ ರಮೇಶ್ ಸೆರೆ

Mainashree
Updated On : 21 Jul 2014, 10:29 am

ಶಿವಮೊಗ್ಗ:  ಅತ್ಯಾಚಾರದ ವಿರುದ್ಧ ದೊಡ್ಡ ದನಿ ಮೊಳಗಿರುವಾಗಲೇ ತಾಲೂಕಿನ ಚಿಕ್ಕಮರಡಿ ಗ್ರಾಮದಲ್ಲಿ ವಿಧವೆಯ ಮೇಲೆ ಸಂಬಂಧಿ, ಕೂಲಿ ಕಾರ್ಮಿಕ ರಮೇಶ್ (26) ಅತ್ಯಾಚಾರವೆಸಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಶನಿವಾರ ಮಧ್ಯ ರಾತ್ರಿ 12 ಗಂಟೆ ಸುಮಾರಿಗೆ ನೆರೆಮನೆಗೆ ನುಗ್ಗಿದ ರಮೇಶ, 9 ವರ್ಷದ ಮಗಳನ್ನು ಹೊಂದಿರುವ 32 ವರ್ಷದ ಕೂಲಿ ಕಾರ್ಮಿಕ ಮಹಿಳೆ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಮೊದಲು ಆಕೆಯ ಮನವೊಲಿಸಲು ರಮೇಶ ಪ್ರಯತ್ನ ಪಟ್ಟಿದ್ದಾನೆ. ಒಲ್ಲದ ಕಾರಣ ಮಹಿಳೆಗೆ ದೈಹಿಕವಾಗಿ ಸಾಕಷ್ಟು ಹಲ್ಲೆ ನಡೆಸಿದ್ದಲ್ಲದೆ, ಆಕೆಯ ಕೈ ಕಾಲು ಕಟ್ಟಿ ಅತ್ಯಾಚಾರ ಎಸಗಿದ್ದಾನೆ. ಈ ಘಟನೆ ನಡೆದಾಗ ಮಗಳು ನಿದ್ರೆ ಮಾಡುತ್ತಿದ್ದಳು.
ಅತ್ಯಾಚಾರ ಎಸಗಿದ ರಮೇಶ ಮಹಿಳೆಯನ್ನು ಬೆದರಿಸಿದ್ದ ಹಿನ್ನೆಲೆ ಪೊಲೀಸರಿಗೆ ದೂರು ನೀಡಿರಲಿಲ್ಲ. ಭಾನುವಾರ ಮಹಿಳೆಯು ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಮಹಿಳೆ ಹೇಳಿಕೆ ಮೇರೆಗೆ ದೂರು ದಾಖಲಿಸಿದರು. ಇನ್ಸ್‌ಪೆಕ್ಟರ್ ದೀಪಕ್ ಹೆಗಡೆ, ಸಬ್‌ಇನ್‌ಪೆಕ್ಟರ್ ಅನಿತಾ ಆರೋಪಿ ರಮೇಶ್‌ನನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 376, 323, 324, 448 ಸೇರಿದಂತೆ ವಿವಿಧ ಕಲಂ ಗಳಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement