ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಭ್ಯರ್ಥಿಯಾಗಿ ರಾಘವೇಂದ್ರ

Rashmi Kasaragodu
Updated On : 22 Jul 2014, 10:56 am

ಶಿಕಾರಿಪುರ: ಕ್ಷೇತ್ರದಲ್ಲಿ ವಿಧಾನಸಭಾ ಮರು ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಂಸದ ರಾಘವೇಂದ್ರರ ಹೆಸರನ್ನು ಸರ್ವಾನುಮತದಿಂದ ಸೋಮವಾರ ನಡೆದ ತುರ್ತು ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಅನುಮೋದಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪರ್ಧಿಸಿ ಜಯಗೊಳಿಸಿದ ಹಿನ್ನಲೆಯಲ್ಲಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಮರುಚುನಾವಣೆಗೆ  ಮಾಜಿ ಸಂಸದ ರಾಘವೇಂದ್ರರ ಹೆಸರನ್ನು ತುರ್ತು ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಕೊಪ್ಪಲು ಆರಂಭದಲ್ಲಿ ಸೂಚಿಸಿದರು.
ಜಿಲ್ಲಾಧ್ಯಕ್ಷ ಆಯನೂರು ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಘವೇಂದ್ರ ಅಭ್ಯರ್ಥಿಯಾಗ ಬೇಕೆಂದು ಮಾಜಿ ಶಾಸಕ ಮಹಾಲಿಂಗಪ್ಪ, ಮುಖಂಡ ಅಗಡಿ ಅಶೋಕ್, ರೇವಣಪ್ಪ, ಬಂಗಾರಿನಾಯ್ಕ, ಭೂಕಾಂತ್, ಸಣ್ಣಹನುಮಂತಪ್ಪ, ಶೇಖರಪ್ಪ, ಕಲ್ಮನೆ ಲೋಕೇಶ್, ಗಾಯತ್ರಿದೇವಿ, ಸೈಯದ್‌ಪೀರ್, ವಿಷ್ಣುಭಟ್,ಟಿ.ಎಸ್. ಮೋಹನ್ ಮುಖಂಡರ ಸಹಿತ ಕಾರ್ಯಕರ್ತರು ಶಿಳ್ಳೆ,ಕೇಕೆ,ಚಪ್ಪಾಳೆ ಮೂಲಕ ಒಕ್ಕೊರಲಿನಿಂದ ಅನುಮೋದಿಸಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷರು ರಾಘವೇಂದ್ರ ಶಿಕಾರಿಪುರ ಕ್ಷೇತ್ರಕ್ಕೆ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಪರಿಗಣಿಸುವಂತೆ ರಾಜ್ಯ ಘಟಕಕ್ಕೆ ಶಿಫಾರಸು ಕಳುಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಯಡಿಯೂರಪ್ಪ ಮಾತನಾಡಿ, ಹಲವು ದಶಕದಿಂದ ಶಿಕಾರಿಪುರ ಬಿಜೆಪಿ ಭದ್ರ ಕೋಟೆಯಾಗಿದ್ದು ಈ ಉಪಚುನಾವಣೆಯನ್ನು ಮುಖಂಡರು,ಕಾರ್ಯಕರ್ತರು ಹಗುರವಾಗಿ ಪರಿಗಣಿಸದಂತೆ ಸೂಚಿಸಿದರು.
ಬೂತ್‌ಮಟ್ಟದಲ್ಲಿ ಹೆಚ್ಚಿನ ಮತ ಪಡೆಯುವಲ್ಲಿ ಯಶಸ್ವಿಯಾದಲ್ಲಿ ಬರಲಿರುವ ತಾಪಂ, ಜಿಪಂ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರಭಾವ ಬೀರಲಿದೆ ಎಂದರು.ಉದ್ಯಮಿ ರುದ್ರೇಗೌಡ, ಕಾಡಾ ಮಾಜಿ ಅಧ್ಯಕ್ಷ ಶೇಖರಪ್ಪ, ಗುರುಮೂರ್ತಿ, ಚನ್ನವೀರಪ್ಪ, ನಿವೇದಿತಾ, ತಾಪಂ ಅಧ್ಯಕ್ಷೆ ಸವಿತಾ, ಶುಭ ರಘು, ಜಿಪಂ ಸದಸ್ಯ ಈಶ್ವರಪ್ಪ, ಶಾಂತಮ್ಮ ಮತ್ತಿತರರು ಹಾಜರಿದ್ದರು.


 ಪ್ರತಿ ಮತದಾರರ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿ, ವಿರೋಧಿ ಮುಖಂಡರ ಬಗ್ಗೆ ತಲೆಕೆಡಿಸಿಕೊಳ್ಳದೆ ಮತದಾರರಿಗೆ ತಾಲೂಕಿನಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿ ಹೇಳಿ
- ಯಡಿಯೂರಪ್ಪ , ಸಂಸದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement