ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಲ್ಲೇ ಅಧ್ಯಯನ, ಸಂಶೋಧನೆ

Rashmi Kasaragodu
Updated On : 22 Jul 2014, 10:57 am

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಹುದ್ದೆಯಿಂದ ಪ್ರೊ. ಎಸ್.ಎ. ಬಾರಿ ಜುಲೈ 23ರಂದು ನಿರ್ಗಮಿಸುತ್ತಿದ್ದಾರೆ. ಪ್ರೊ. ಬಾರಿ ತಮ್ಮ ಅವಧಿಯಲ್ಲಿ ಶೈಕ್ಷಣಿಕ ಹಾಗೂ ಸಂಶೋಧನಾ ಕೇಂದ್ರದಲ್ಲಿ ಒತ್ತು ನೀಡಿದ ಬಗ್ಗೆ ವಿಸ್ತೃತ ವಿವರಣೆ ನೀಡಿದ್ದಾರೆ.
ನಾಲ್ಕು ವರ್ಷದ ಅವಧಿಯಲ್ಲಿ 1000ಕ್ಕೂ ಹೆಚ್ಚು ಪ್ರಬಂಧಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಕಟವಾಗಿದ್ದು, ಪ್ರಕಟಣಾ ಸೂಚ್ಯಂಕ ಹಾಗೂ ಎಚ್ ಸೂಚ್ಯಂಕಗಳು ಏರಿಕೆ ಕಂಡಿವೆ. ಈ ಅವಧಿಯಲ್ಲಿ ಎರಡು ಪೇಟೆಂಟ್ ಸಿಕ್ಕಿವೆ ಎಂದು ಹೆಮ್ಮೆಯಿಂದ ಹೇಳಿದರು.
ಈಗ ಎಲ್ಲಾ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಪರಿನಿಯಮ ರಚಿಸಲಾಗಿದೆ. ತಮ್ಮ ಅವಧಿಯಲ್ಲಿ 45 ಪರಿನಿಯಮಗಳನ್ನು ರಚಿಸಲಾಗಿದ್ದು, ಶೀಘ್ರವೇ ಅನುಮತಿ ಸಿಗಲಿದೆ ಎಂದರು.
2015ರಲ್ಲಿ ವಿಶ್ವವಿದ್ಯಾಲಯಕ್ಕೆ ನ್ಯಾಕ್ ಸಮಿತಿ ಭೇಟಿ ನೀಡಲಿದ್ದು, ಪುನರ್ ನೋಂದಾವಣಿಗೆ ಬೇಕಾಗಿರುವ ಎಲ್ಲಾ ಅಭಿವೃದ್ಧಿ ಹಾಗೂ ಪೂರ್ವ ತಯಾರಿಗೆ ಒತ್ತುಕೊಟ್ಟು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಪರಿಕ್ಷಾಂಗ ಸಾಧನೆ: ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದಲ್ಲಿ ಆಗುತ್ತಿದ್ದ ಮಾನವ ನಿರ್ಮಿತ ದೋಷ ಸರಿಪಡಿಸುವ ಉದ್ದೇಶದಿಂದ ಹಲವಾರು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ರಾಜ್ಯದಲ್ಲಿಯೇ ಮೊಟ್ಟ ಮೊದಲಬಾರಿಗೆ ಪರಿಸರ ಅಧ್ಯಯನ ಹಾಗೂ ಭಾರತೀಯ ಸಂವಿಧಾನ ವಿಷಯಗಳಲ್ಲಿ ಪ್ರಶ್ನೆಕೋಶ ಸಂಗ್ರಹ ಹಾಗೂ ಓಎಂಆರ್ ವಿಧಾನದಲ್ಲಿ ಪ್ರಶ್ನೆ ಪತ್ರಿಕೆ ಅಳವಡಿಸಿ ಮಾದರಿಯಾಗಿದೆ. ಪಾರದರ್ಶಕ ಪರೀಕ್ಷಾ ಪದ್ಧತಿ ಜಾರಿಗೊಳಿಸಿದ ಹೆಮ್ಮೆ ಈ ವಿಶ್ವವಿದ್ಯಾಲಯಕ್ಕಿದೆ ಎಂದರು.
ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ಬದಲಿಸಲಾಗದ ಅತಿ ಸುರಕ್ಷಿತ ಮಾನದಂಡ ಆಧಾರಿದ ಕಾಗದದ ಮೇಲೆ ಮುದ್ರಿಸಿ ಕೊಡಲಾಗುತ್ತಿದೆ. ಯಾವುದೇ ಕಾರಣಕ್ಕೂ ನಕಲಿ ಚಟುವಟಿಕೆ ನಡೆಯದಂತೆ ಕಡಿವಾಣ ಹಾಕಲಾಗಿದೆ. ಈ ಹಿಂದೆ ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದ ನಾಲ್ವರನ್ನು ಅಮಾನತು ಮಾಡಲಾಗಿದ್ದು, ಇನ್ನೂ ನಾಲ್ವರಿಗೆ ಹಿಂಬಡ್ತಿ ನೀಡಲಾಗಿದೆ ಎಂದರು.
ಆರ್ಥಿಕ ಬೆಳವಣಿಗೆ:  ತಾವು ಅಧಿಕಾರಕ್ಕೆ ಬಂದಾಗ ಇದ್ದ ರು. 7.5 ಕೋಟಿ ಸಾಲ ಬಡ್ಡಿ ಸಮೇತ ತೀರಿಸಲಾಗಿದೆ. ಈಗ ವಿಶ್ವವಿದ್ಯಾಲಯವು ಆರ್ಥಿಕವಾಗಿ ಸದೃಢವಾಗಿದೆ ಎಂದ ಕುಲಪತಿ ಪ್ರೊ.ಎಸ್.ಎ. ಬಾರಿ, ಎಲ್ಲಾ ಆರ್ಥಿಕ ವೆಚ್ಚದ ಬಳಕೆ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂದರು.
ವಿದ್ಯಾರ್ಥಿಗಳ ಹಿತರಕ್ಷಣೆ, ನೌಕರರ ಕ್ಷೇಮಾಭಿವೃದ್ಧಿ ಯೋಜನೆಗಳಲ್ಲದೇ, ಹಸಿರು ಶಕ್ತಿ ಯೋಜನೆ ಮೂಲಕ ಅಸಂಪ್ರದಾಯಿಕ ಇಂಧನ ಮೂಲ ಅಭಿವೃದ್ಧಿಪಡಿಸಲಾಗಿದೆ ಎಂದರು.
ದೂರ ಶಿಕ್ಷಣ ನಿರ್ದೇಶನಾಲಯವು ಇದೇ ಅವಧಿಯಲ್ಲಿ ದೂರ ಶಿಕ್ಷಣ ನಿರ್ದೇಶನಾಲಯದ ಮಾನ್ಯತೆ ಪಡೆದಿದೆ. ಕರ್ನಾಟಕ ರಾಜ್ಯ ಸಿಬ್ಬಂದಿ ತರಬೇತಿ ಸಂಸ್ಥೆಯೊಂದಿಗೆ ಬಾಷಾಂತರ ತರ್ಜುಮೆ ಎಂಬ ಡಿಪ್ಲೊಮಾ ಕೋರ್ಸ್ ಆರಂಭಿಸಿದೆ ಎಂದರು.
ಕುಲಸಚಿವೆ ಎಸ್. ಮಲ್ಲಿಕಾ ಎಸ್. ಘಂಟಿ, ಪರೀಕ್ಷಾಂಗ ಕುಲಸಚಿವ ಡಾ. ಭೋಜಾನಾಯ್ಕ್, ಹಣಕಾಸು ಅಧಿಕಾರಿ ಪ್ರೊ. ಕೇಶವಮೂರ್ತಿ ಉಪಸ್ಥಿತರಿದ್ದರು.


ಪ್ರೊ.ಬಾರಿ ಸಾಧನೆ

ಟಿ ಮನಃ ಶಾಸ್ತ್ರ, ಸಂಖ್ಯಾಶಾಸ್ತ್ರ, ಮಾನವ ಸಂಪನ್ಮೂಲ ನಿರ್ವಹಣೆ, ಮಹಿಳಾ ಅಧ್ಯಯನ ವಿಷಯಗಳಲ್ಲಿ ಪದವಿ ಕೋರ್ಸ್ ಆರಂಭ
ಟಿ ಮಹಿಳಾ ಸಂಪನ್ಮೂಲ ಕೇಂದ್ರ ಸ್ಥಾಪನೆ
ಟಿ ಎಲ್ಲಾ ಅಧ್ಯಯನ ವಿಭಾಗಗಳಿಗೂ ವೈಫೈ ಸಂಪರ್ಕ
ಟಿ ಎವಿವ್ಯೂ ಸ್ಟುಡಿಯೋ ಹಾಗೂ ಪ್ರಸರಣ ಕೇಂದ್ರ ಸ್ಥಾಪನೆಗೆ ಕ್ರಮ
ಟಿ ಜರ್ಮನಿಯ ಝಾಲ್ಫ್, ರಷ್ಯಾದ ಕಲ್ಮಾಕ್ ವಿಶ್ವವಿದ್ಯಾಲಯ, ಕೆನಡಾದ ಮೆಕ್ ಗಿಲ್ ವಿಶ್ವವಿದ್ಯಾಲಯ, ಪೆನ್ ಸ್ಟೇಟ್ ವಿಶ್ವವಿದ್ಯಾಲಯ, ಭಾರತದ ಸಿಆರ್‌ಡಿಐ ವಿಶ್ವವಿದ್ಯಾಲಯಗಳೊಂದಿಗೆ ಶೈಕ್ಷಣಿಕ ಹಾಗೂ ಸಂಶೋಧನಾ ಸಹಭಾಗಿತ್ವ
ಟಿ ಬಾಳೆಗಿಡದ ಅಂಗಾಂಶ ಕಸಿ, ಔಷಧ ಸಸ್ಯಗಳು, ಮಹಿಳಾ ಅಧ್ಯಯನ ಹಾಗೂ ಗ್ರಾಮೀಣ ಅಭಿವೃದ್ಧಿ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಸಂಶೋಧನೆಗೆ ಪೂರಕ ಉತ್ತೇಜನ
ಟಿ ಸ್ಟೂಡೆಂಟ್ ಡಾಟಾಬೇಸ್ ಚಾಲ್ತಿಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement