ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜನಮುಖಿ ಕಾರ್ಯಕ್ರಮ ಅನುಕರಣೀಯ: ಗುರುನಾಥ ಬಾಪಟ್

Rashmi Kasaragodu
Updated On : 22 Jul 2014, 10:57 am

ಸಾಗರ: ಇಲ್ಲಿನ ಧ್ವನಿ ಬೆಳಕು ಶಾಮಿಯಾನ ಮಾಲೀಕರ ಸಂಘದ ವತಿಯಿಂದ ಎರಡು ದಿನಗಳ ಉದ್ಯಮಶೀಲತಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಎಸ್‌ಆರ್‌ಬಿ ಟ್ರಸ್ಟ್ ಅಧ್ಯಕ್ಷ ಗುರುನಾಥ ಬಾಪಟ್, ಶ್ರಮಿಕವರ್ಗದ ಸಮಸ್ಯೆ ನೂರಾರು ಇರುತ್ತದೆ. ಸಮಸ್ಯೆ ನಡುವೆ ಸಂಘಟನೆ ಕಟ್ಟಿ ಜನಮುಖಿ ಕಾರ್ಯಕ್ರಮ ರೂಪಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ನಿಮ್ಮ ಸಂಕಲ್ಪ ಅನುಕರಣೀಯ ಎಂದು ಹೇಳಿದರು. ಶಾಮಿಯಾನ ಹಾಗೂ ಧ್ವನಿಬೆಳಕು ಉದ್ಯಮ ನಡೆಸುತ್ತಿರುವವರು ಸಂಕಷ್ಟದಲ್ಲಿದ್ದಾರೆ. ವಿದ್ಯಾಭ್ಯಾಸವೂ ಕಡಿಮೆ ಇರುತ್ತದೆ. ಇದರ ನಡುವೆ ವೃತ್ತಿಕೌಶಲ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳನ್ನು ನಡೆಸುತ್ತಿರುವುದು ಒಳ್ಳೆಯದು. ಆಧುನಿಕ ಯುಗದಲ್ಲಿ ಸ್ಪರ್ಧೆ ಹೆಚ್ಚಿರುತ್ತದೆ. ಸ್ಪರ್ಧೆಗೆ ನಿಮ್ಮನ್ನು ತೆರೆದುಕೊಳ್ಳಬೇಕು. ಹೊಸಹೊಸ ಯಂತ್ರಗಳನ್ನು ನಿಮ್ಮ ಉದ್ಯಮದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜನರಿಗೆ ಉತ್ತಮ ಸೇವೆ ಕೊಡಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ವಿ.ಗಂಗಾಧರ್, ನಾವು ದುಡಿಮೆ ಮಾಡಿ ಊಟ ಮಾಡುವವರು. ಸರ್ಕಾರದ ಯಾವುದೆ ಸೌಲಭ್ಯ ಇಲ್ಲದೇ  ಹೋದರು ಸ್ವತಂತ್ರವಾಗಿ ಉದ್ದಿಮೆ ನಡೆಸಿ ಜನರಿಗೆ ಅನುಕೂಲಕರ ರೀತಿಯಲ್ಲಿ ಸಂಘದ ಮೂಲಕ ಕಾರ್ಯ ಯೋಜನೆ ರೂಪಿಸುತ್ತಿದ್ದೇವೆ. ಸಂಘದ ಸದಸ್ಯರು ಇಂತಹ ಕಾರ್ಯಾಗಾರಗಳಲ್ಲಿ ಹೆಚ್ಚು ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ಹೇಳಿದರು. ಸಂಘದ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ್, ಗೌರವಾಧ್ಯಕ್ಷೆ ಶಶಿಕಲಾ ಶಾಂತಾ, ಉಪಾಧ್ಯಕ್ಷ ಎಚ್.ಆರ್. ಶ್ರೀಧರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement