ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಓಮ್ನಿ-ಕ್ಯಾಂಟರ್ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು

Rashmi Kasaragodu
Updated On : 23 Jul 2014, 11:27 am

ತೀರ್ಥಹಳ್ಳಿ: ಮಾರುತಿ ಓಮ್ನಿ ಮತ್ತು ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ದುರ್ಮರಣ ಹೊಂದಿದ ದಾರುಣ ಘಟನೆ ತೀರ್ಥಹಳ್ಳಿ ಸಮೀಪದ ಕಲ್ಮನೆ ಕ್ರಾಸ್‌ನಲ್ಲಿ ಸಂಭವಿಸಿದೆ. ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ಈ ಅಪಘಾತ ನಡೆದಿದ್ದು, ಆಗುಂಬೆ ಕಡೆಯಿಂದ ಬರತ್ತಿದ್ದ ಮಾರುತಿ ಓಮ್ನಿ ಹಾಗೂ ತೀರ್ಥಹಳ್ಳಿಯಿಂದ ಆ ಮಾರ್ಗವಾಗಿ ಹೋಗುತ್ತಿದ್ದ ಕ್ಯಾಂಟರ್ ನಡುವೆ ಅಪಘಾತ ನಡೆದಿದೆ. ಮಾರುತಿ ವ್ಯಾನಿನಲ್ಲಿದ್ದ ಕಲ್ಲೇಶ್ (45) ಹಾಗೂ ಶಿವರತ್ನಮ್ಮ (65) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವ್ಯಾನಿನಲ್ಲಿದ್ದ ಉಳಿದ ನಾಲ್ವರಿಗೆ ತೀವ್ರ ಪೆಟ್ಟಾಗಿದ್ದು ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಗಿದೆ. ಪಾರ್ವತಮ್ಮ, ಗೀತಾ, ಶಿವಬಸಯ್ಯ ಹಾಗೂ ಲೋಕೇಶ್ ಇವರು ಗಾಯಗೊಂಡವರು. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರಾಗಿದ್ದು, ಅಪಘಾತದಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರು ಒಂದೇ ಕುಟುಂಬದ ಸದಸ್ಯರಾಗಿದ್ದಾರೆ. ಮೃತಪಟ್ಟ ಕಲ್ಲೇಶ ಅವರ ಮಗನನ್ನು ಬ್ರಹ್ಮಾವರದ ವಸತಿ ಶಾಲೆಗೆ ದಾಖಲು ಮಾಡಿಸಿ, ವಾಪಸು ಬರುತ್ತಿದ್ದಾಗ ದುರ್ಘಟನೆ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement