ಜಿಲ್ಲಾ ಕಾರಾಗೃಹದಲ್ಲಿ ತಪ್ಪೊಪ್ಪಿಗೆ ಚೌಕಾಶಿ ಕಾರ್ಯಕ್ರಮ
ಶಿವಮೊಗ್ಗ: ಸನ್ನಡತೆ ಮತ್ತು ತಪ್ಪೊಪ್ಪಿಕೊಳ್ಳುವ ಕೈದಿಗಳಿಗೆ ವಿನಾಯಿತಿ ಇದೆ. ಜೈಲಿನಲ್ಲಿ ನೀತಿ ನಿಯಮ ಪಾಲಿಸಿ, ಉತ್ತಮ ನಡತೆ ಹೊಂದುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಲಯ ನ್ಯಾಯಾಧೀಶ ಜೈಶಂಕರ್ ಹೇಳಿದರು.
ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಕಾರಾಗೃಹ ಮತ್ತಿತ್ತರ ಇಲಾಖೆ ಆಶ್ರಯದಲ್ಲಿ ನಗರದ ಜಿಲ್ಲಾ ಕಾರಾಗೃಹದಲ್ಲಿ ಮಂಗಳವಾರ ಆಯೋಜಿಸಿದ್ದ ತಪ್ಪೊಪ್ಪಿಗೆ ಚೌಕಾಶಿ ಮತ್ತು ವಿಚಾರಣಾಧೀನ ಕೈದಿಗಳ ಹಕ್ಕು-ಕರ್ತವ್ಯಗಳು ಕುರಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೈಲಿನಲ್ಲಿದ್ದೇವೆ ಎಂಬ ಬೇಸರ ಬೇಡ. ಕೆಲವೊಮ್ಮೆ ನಿರಪರಾಧಿಗಳೂ ಜೈಲಿನಲ್ಲಿರುತ್ತಾರೆ. ವಿಚಾರಣಾಧೀನ ಕೈದಿಗಳೂ ಇರುತ್ತಾರೆ. ಅವರಿಗೆ ನ್ಯಾಯ ನೆರವು ನೀಡುವುದು ಪ್ರಾಧಿಕಾರದ ಕೆಲಸ ಎಂದರು.
ಎರಡನೇ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ವಿಜಯಕುಮಾರ ರೈ, ಶಿಕ್ಷಕ ಗೋಪಾಲಕೃಷ್ಣ ಮಾತನಾಡಿದರು. ಜಿಲ್ಲಾ ಕಾರಾಗೃಹ ಅಧೀಕ್ಷಕ ಬಸವರಾಜು, ನ್ಯಾಯವಾದಿ ಜಿ.ಎನ್. ನೀಲಾಕ್ಷಿ, ಸುರೇಶ್ ಡಿ. ಇದ್ದರು.