ಮಳೆ: ಲಿಂಗನಮಕ್ಕಿಗೆ ಒಂದೇ ದಿನ 3.5 ಅಡಿ ನೀರು ಏರಿಕೆ
ಶಿವಮೊಗ್ಗ: ಜಿಲ್ಲಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ 3.5 ಅಡಿಯಷ್ಟು ನೀರಿನ ಮಟ್ಟ ಏರಿಕೆಯಾಗಿದೆ. ಒಳಹರಿವು 58,700 ಕ್ಯುಸೆಕ್ ತಲಪಿತ್ತು. ಭದ್ರಾ ಜಲಾಶಯ ಮಟ್ಟವು 161 ಅಡಿ ದಾಟಿದ್ದು, ರೈತರು ನಿಟ್ಟುಸಿರು ಬಿಡುವಂತಾಗಿದೆ. ತುಂಗಾ ನದಿ ಪ್ರವಾಹದಲ್ಲಿ ಹೆಚ್ಚಳವಾಗಿದ್ದು, ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಮಂಡಗದ್ದೆ ಪಕ್ಷಿಧಾಮ ಇನ್ನೂ ಜಲಾವೃತವಾಗಿದೆ