ಉದ್ಯೋಗ ಆಮಿಷವೊಡ್ಡಿ ಹೆಣ್ಣು ಮಕ್ಕಳ ಕರೆದೊಯ್ಯಲು ಬಂದಿದ್ದ ತಂಡಕ್ಕೆ ಧರ್ಮದೇಟು
ತ್ಯಾಗರ್ತಿ: ಇಲ್ಲಿನ ಅಡ್ಡೇರಿ ಗ್ರಾಮದಲ್ಲಿ ಉದ್ಯೋಗದ ಆಮಿಷ ತೋರಿಸಿ ಹೆಣ್ಣು ಮಕ್ಕಳನ್ನು ಕರೆದೊಯ್ಯಲು ಬಂದಿದ್ದ ತಂಡದವರನ್ನು ಗ್ರಾಮಸ್ಥರು ಹಿಡಿದು ಚೆನ್ನಾಗಿ ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಮೂವರು ಯುವಕರು, ಒಬ್ಬ ಯುವತಿ ಅಡ್ಡೇರಿ ಗ್ರಾಮಕ್ಕೆ ಬಂದು, ಗ್ರಾಮದ ಹೊರಭಾಗದಲ್ಲಿ ಇಂಡಿಕಾ ಕಾರನ್ನು ನಿಲ್ಲಿಸಿಕೊಂಡು ಉದ್ಯೋಗದ ಆಮಿಷ ತೋರಿಸಿ ಹೆಣ್ಣು ಮಕ್ಕಳನ್ನು ಕರೆದೊಯ್ಯಲು ಪ್ರಯತ್ನಿಸುತ್ತಿದ್ದರು. ಒಬ್ಬ ಯುವತಿಯನ್ನು 2 ದಿನ ಮೊದಲು ಊರಿನೊಳಕ್ಕೆ ಕಳುಹಿಸಿದ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು ಬೆಂಗಳೂರಿನ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಒಳ್ಳೆಯ ಸಂಬಳದೊಂದಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ 2-3 ಯುವತಿಯರನ್ನು ಕರೆದೊಯ್ಯಲು ಯೋಜನೆ ರೂಪಿಸಿದ್ದರು. ಈ ಯೋಜನೆಯಂತೆ ಬಂದಿದ್ದ ತಂಡದ ಯುವಕರ ಅನುಮಾನಾಸ್ಪದ ನಡವಳಿಕೆ ಕಂಡ ಗ್ರಾಮಸ್ಥರು ಅವರನ್ನು ವಿಚಾರಿಸಿದಾಗ ಸಮರ್ಪಕ ಉತ್ತರ ಬಾರದಿದ್ದಾಗ ಹುಡುಗಿಯರ ಮಾರಾಟ ಜಾಲವಿರಬಹುದೆಂದು ಗ್ರಾಮಸ್ಥರು ಅನುಮಾನಪಟ್ಟರು. ನಾಲ್ವರು ಪರಾರಿಯಾಗಿದ್ದಾರೆ. ಈ ಸಂಬಂದ ಗ್ರಾಮಸ್ಥರು ಅವರ 2 ಮೊಬೈಲ್ ಗಳನ್ನು ಸಾಗರ ಠಾಣೆಗೆ ಒಪ್ಪಿಸಿ, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ದೂರು ನೀಡಿದ್ದಾರೆ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ಗ್ರಾಪಂ ಸದಸ್ಯ ಕೃಷ್ಣಮೂರ್ತಿ, ಜಗದೀಶನೀಚಡಿ, ಶ್ರೀಧರ, ಅಶೋಕ್, ಯೋಗೀಶ್ ಮೋಹನ, ಮುತ್ತುಗೌಡ, ಶ್ರೀಧರ ಸಂಪಳ್ಳಿ ಒತ್ತಾಯಿಸಿದ್ದಾರೆ.