ಕೃಷಿ ಹೊಂಡಕ್ಕೆ ಬಿದ್ದು ಸಾವು
ತ್ಯಾಗರ್ತಿ: ಲಾವಿಗ್ಗೆರೆ ಗ್ರಾಮದಲ್ಲಿ ಜಂಬಾನಿ ಗ್ರಾಮದ ಯುವಕ ತಿಮ್ಮಪ್ಪ (25) ಜಮೀನಿನಲ್ಲಿರುವ ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ.
ಗುರುವಾರ ಮಧ್ಯಾಹ್ನ ಜಂಬಾನಿ ಗ್ರಾಮದ ಬುಡ್ಡಿ ಮಂಜಪ್ಪನವರ ಗದ್ದೆ ಉಳುಮೆ ಮಾಡಿ ಪವರ್ ಟಿಲ್ಲರ್ ತೆಗೆದುಕೊಂಡು ಮನೆಗೆ ಹೋಗುವಾಗ ಗದ್ದೆಯಲ್ಲಿ ಸುಮಾರು 15 ಅಡಿ ಆಳದ ಕೃಷಿ ಹೊಂಡದಲ್ಲಿ ಟಿಲ್ಲರ್ ಸಮೇತ ಬಿದ್ದಿದ್ದಾರೆ. ಜಂಬಾನಿ ಗ್ರಾಮದ ಜಗನ್ನಾಥ ಮೃತ ದೇಹ ಮೇಲಕ್ಕೆತ್ತಿದರು. ಸಾಗರ ಗ್ರಾಮಾಂತರ ಸಿಪಿಐ ಹೊನ್ನಪ್ಪ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಹೊಳಿಯಪ್ಪ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಕಾಗೋಡು ಅಣ್ಣಪ್ಪ, ತಹಶೀಲ್ದಾರ್ ಧರ್ಮೋಜೀರಾವ್, ಸಾಮಾಜಿಕ ಕಾರ್ಯಕರ್ತ ಕುಮಾರಸ್ವಾಮಿ, ವೀರಪ್ಪ ಲಾವಿಗ್ಗೆರೆ, ಜಾನ್, ಹಾಗೂ ಬರೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.