ಶಿಕ್ಷಣ ಪ್ರತಿಷ್ಠಾನದಿಂದ ಅತಿಥಿ ಪುರಸ್ಕಾರ
ಶಿವಮೊಗ್ಗ: ಸಂತೆಕಡೂರು ಪಟೇಲ್ ಈಶ್ವರಪ್ಪ ಶಿಕ್ಷಣ ಪ್ರತಿಷ್ಠಾನ ನಡೆಸುತ್ತಿರುವ ಅತಿಥಿ ಹಾಸ್ಟೆಲ್ನಲ್ಲಿ ಜುಲೈ 27ರಂದು ಅತಿಥಿ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ. ವಿಶೇಷ ಆಹ್ವಾನಿತರಾಗಿ ವಿದ್ಯಾಭಾರತಿ ಕಾಲೇಜಿನ ಉಪನ್ಯಾಸಕರಾದ ನಾಗಲಕ್ಷ್ಮಿ ಶಂಕರನಾರಾಯಣ, ಹಿರಿಯ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಉಪಸ್ಥಿತರಿರುವರು. ಜಿಲ್ಲೆಯ ಪಿಯುಸಿ ಟಾಪರ್ ಎ.ಎಸ್.ಸೌರಭ, ಎಸ್ಎಸ್ಎಲ್ಸಿ ಟಾಪರ್ಗಳಾದ ಎಂ.ಚೇತನ, ಸ್ನೇಹಾ ಎಸ್.ನಾಯಕ್ ಹಾಗೂ ಅತಿಥಿ ಹಾಸ್ಟೆಲ್ ಟಾಪರ್ಸ್ಗಳಾದ ಸುಷ್ಮಾ ಸಿ.ಪುರದ, ಎಂ.ಆರ್.ರಂಜಿತಾ ಅವರನ್ನು ಪುರಸ್ಕರಿಸಲಾಗುತ್ತದೆ. 27ರಂದು ಸಂಜೆ 6.30ಕ್ಕೆ ಮೀನಾಕ್ಷಿ ಭವನ ಹಿಂಭಾಗದ ಅತಿಥಿ ಅಂಗಳದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರತಿಷ್ಠಾನ ತಿಳಿಸಿದೆ.