ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹೋಮಿಯೋಪತಿ ಪದ್ಧತಿಯಲ್ಲಿ ಪಶುಚಿಕಿತ್ಸೆ

Rashmi Kasaragodu
Updated On : 25 Jul 2014, 11:08 am

ತೀರ್ಥಹಳ್ಳಿ:  ರೈತರ ಒಡನಾಡಿ ಪಶುಗಳ ಪಾಲನೆ ಆರೋಗ್ಯ ರಕ್ಷಣೆ ತುಂಬಾ ಮಹತ್ವದ್ದು. ಇಂದು ಸಾಮಾನ್ಯವಾಗಿ ಪದವೀಧರ ಪಶುವೈದ್ಯರನ್ನೇ ರೈತರು ನೆಚ್ಚಿಕೊಳ್ಳುತ್ತಿದ್ದಾರೆ. ಹಾಗೆಯೇ ಕೆಲವೊಂದು ಕಾಯಿಲೆ, ತೊಂದರೆಗಳಿಗೆ ನಾಟೀ, ಮೂಲಿಕಾ ವೈದ್ಯರನ್ನೂ ಸಂಪರ್ಕಿಸುವುದಿದೆ. ಇಂತಹ ಸಂದರ್ಭದಲ್ಲಿ ಇತ್ತೀಚೆಗೆ ಕೆಲವು ಪಶುವೈದ್ಯರು, ರೈತರು ಹೋಮಿಯೋಪತಿ ಪದ್ಧತಿಯಲ್ಲಿ ಪಶುಚಿಕಿತ್ಸೆಯನ್ನು ಮಾಡುತ್ತಿದ್ದಾರೆ. ಈ ಪರ್ಯಾಯ ಚಿಕಿತ್ಸೆ ಕಡಿಮೆ ಖರ್ಚಿನದು ಮತ್ತು ಅಲೋಪತಿ ಗುಣಪಡಿಸಲಾರದ ಕೆಲವು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ. ಸುಲಭದಲ್ಲಿ, ಕೈಗೆಟಕುವ ಬೆಲೆಯಲ್ಲಿ ಸಿಗುವ ಈ ಚಿಕಿತ್ಸೆ ರಾಜ್ಯದ ರೈತರಿಗೆ, ಗೋ ಸೇವಕರಿಗೆ ಅತ್ಯಂತ ಉಪಯುಕ್ತವಾಗಲಿದೆ. ಹಲವು ವರುಷಗಳಿಂದ ಪ್ರಯೋಗ ಮಾಡುತ್ತಾ ಯಶಸ್ವಿಯಾದ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಶಂಕರನಾರಾಯಣ ಐತಾಳರು ತೀರ್ಥಹಳ್ಳಿಯಲ್ಲಿ ಒಂದು ದಿನದ ತರಬೇತಿ ನಡೆಸಿಕೊಡಲಿದ್ದಾರೆ. ಜುಲೈ 27 ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ತೀರ್ಥಹಳ್ಳಿಯ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನದ ಆವರಣದಲ್ಲಿ ಈ ತರಬೇತಿ ನಡೆಯಲಿದೆ. ಅಧ್ಯಕ್ಷತೆ ಖ್ಯಾತ ಪಶು ವೈದ್ಯರು, ನಿವೃತ್ತ ಪ್ರಾಧ್ಯಾಪಕ ಡಾ.ವಿಶ್ವನಾಥ ರೆಡ್ಡಿ ವಹಿಸಲಿದ್ದಾರೆ. ಕೃಷಿ ಪ್ರಯೋಗ ಪರಿವಾರ ಮತ್ತು ಪುರುಷೋತ್ತಮ ಸಾವಯವ ಕೃಷಿ ಪರಿವಾರ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ವಿವರಗಳಿಗೆ: 9449623275 ಅಥವಾ 08181 228340.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement