ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಭೀಕರ ಕಾರು ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು

Rashmi Kasaragodu
Updated On : 26 Jul 2014, 11:00 am

ತೀರ್ಥಹಳ್ಳಿ: ಭೀಕರ ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟ ದಾರುಣ ಘಟನೆ  ತೀರ್ಥಹಳ್ಳಿ ಕುಶಾವತಿ ಸೇತುವೆ  ಸಮೀಪ ನೆಡೆದಿದೆ. ಶುಕ್ರವಾರ ಮಧ್ಯಾಹ್ನ ಅಪಘಾತ ಸಂಭವಿಸಿದ್ದು, ಸ್ಟೇರಿಂಗ್ ತುಂಡಾಗಿದ್ದರಿಂದ ನಿಯಂತ್ರಣ ತಪ್ಪಿ ಸ್ಯಾಂಟ್ರೋ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರು ಮಗುಚಿ ಬಿದ್ದಿದ್ದು ಸುನಿಲ್ (33) ಹಾಗೂ ಸುನಿಲ್ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರ ಪೆಟ್ಟಾಗಿರುವ ಸುರೇಶ್‌ರನ್ನು  ಚಿಕಿತ್ಸೆಗಾಗಿ ಮಣಿಪಾಲಕ್ಕೆ ಸಾಗಿಸಲಾಗಿದೆ. ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ತೀರ್ಥಹಳ್ಳಿ ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಸಂಭವಿಸಿದ ಮೂರನೇ ವಾಹನ ಅಪಘಾತವಿದು.  ಈ ಮೂರು ಅಪಘಾತದಲ್ಲೂ ಪ್ರಾಣಹಾನಿ ಸಂಭವಿಸಿವೆ. ಕಲ್ಮನೆ ಸಮೀಪ ನಡೆದ ಕಾರು ಅಪಘಾತದಲ್ಲಿ ಇಬ್ಬರು, ಕೋಳಿಗೆಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಅಪಘಾತಗಳಿಂದ ಒಟ್ಟು 5 ಜನ ಮೃತಪಟಿದ್ದಾರೆ.


ಮನೆ ಗೋಡೆ ಕುಸಿತ: ಕುಟುಂಬ ಪಾರು
ಸಾಗರ: ತಾ. ಆನಂದಪುರಂ ಹೋಬಳಿ ತಾವರೆಹಳ್ಳಿ ಜೇಡಿಸರದಲ್ಲಿ ವಿಪರೀತ ಮಳೆಯಿಂದ ಮನೆಯ ಗೋಡೆ ಕುಸಿದು ಮನೆಯಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಗುರುವಾರ ನಡೆದಿದೆ. ಜೇಡಿಸರದ ನಿವಾಸಿ ದೊಡ್ಡಗೂರಪ್ಪ ಎಂಬುವವರ ಮನೆಯ ಗೋಡೆ ಕುಸಿದು ಮನೆಯಲ್ಲಿದ್ದ ಪತ್ನಿ ಜಯಮ್ಮ ಹಾಗೂ ಮಗಳು ಮಂಜುಳಾ ಅಪಾಯದಿಂದ ಪಾರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement