ಯೋಗಾಸನ ಸ್ಪರ್ಧೆ ಪಾಲಾಕ್ಷಪ್ಪ ಚಾಂಪಿಯನ್
ಭದ್ರಾವತಿ: ಕರ್ನಾಟಕ ಯೋಗಸಂಸ್ಥೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಸಿದ 34ನೇ ರಾಜ್ಯಮಟ್ಟದ ಯೋಗಾಸನ ಚಾಂಪಿಯನ್ಷಿಪ್ ಸ್ಪರ್ಧೆಯಲ್ಲಿ ಭದ್ರಾವತಿಯ ಎ.ವಿ. ಯೋಗಕೇಂದ್ರ, ವಿಐಎಸ್ಎಲ್ ಯೋಗ ಸ್ಪೋರ್ಟ್ಸ್ನ ವಿಐಎಸ್ಎಲ್ನಲ್ಲಿ ವೃತ್ತ ಕಾರ್ಮಿಕ ಪಾಲಾಕ್ಷಪ್ಪ ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ. 25ರಿಂದ 40 ವರ್ಷ ವಯೋವುತಿಯೊಳಗೆ ಸೀಮಾ ಮೊದಲನೇ ಸ್ಥಾನ, 40 ರಿಂದ 50 ವರ್ಷ ವಯೋವುತಿಯೊಳಗೆ ವಿಜಯಮ್ಮ ಮೊದಲನೇ ಸ್ಥಾನ, 50 ರಿಂದ 60 ವರ್ಷ ವಯೋವುತಿಯೊಳಗೆ ಲಕ್ಷ್ಮಿ ಪ್ರಥಮ ಸ್ಥಾನ, 50 ರಿಂದ 60 ವರ್ಷ ವಯೋವುತಿಯೊಳಗೆ ವಿಐಎಸ್ಎಲ್ ಕಾರ್ಮಿಕ ಪರಶುರಾಮಯ್ಯ ದ್ವಿತೀಯ, 40 ರಿಂದ 50 ವರ್ಷ ವಯೋವುತಿಯೊಳಗೆ ರಘುನಾಥ ತೃತೀಯ ಸ್ಥಾನ, 60 ವರ್ಷ ಮೇಲ್ಪಟ್ಟ ವಯೋವುತಿಯೊಳಗೆ ವಿಐಎಸ್ಎಲ್ ನಿವೃತ್ತ ಕಾರ್ಮಿಕ ಪರಮೇಶ್ವರಾಚಾರ್ ನಾಲ್ಕನೇ ಸ್ಥಾನ ಹಾಗೂ ವಿಐಎಸ್ಎಲ್ನ ವೃತ್ತ ಕಾರ್ಮಿಕ ವಾದಿರಾಜಾಚಾರ್ ಐದನೇ ಸ್ಥಾನ ಮತ್ತು 8ರಿಂದ 14 ವರ್ಷ ವಯೋವುತಿಯೊಳಗೆ ಧನುಷ್ 6ನೇ ಸ್ಥಾನ ಗಳಿಸಿದ್ದಾರೆ.
ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು
ಸೊರಬ: ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಳಿದ ಮರರೂರು ಗ್ರಾಮದ ಮಾರುತಿ (28) ಎಂಬವರು ಮೃತಪಟ್ಟ ಘಟನೆ ಜಡೆ ಗ್ರಾಮದ ಬಳಿ ನಡೆದಿದೆ. ಜಮೀನಿನಲ್ಲಿ ಕಳೆ ಕೀಳುವಾಗ ಈ ಘಟನೆ ನಡೆದಿದೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ