ಕಲಿತ ವಿದ್ಯೆ ಕಳವು ಅಸಾಧ್ಯ: ಸಾಮ್ಯಾನಾಯ್ಕ
ಶಿರಾಳಕೊಪ್ಪ: ವಿದ್ಯೆ ಮತ್ತು ಜ್ಞಾನ ಪಡೆಯಲು ಯಾರ ಪರವಾನಗಿ ಬೇಕಿಲ್ಲ, ನಾವು ಕಲಿತ ವಿದ್ಯೆಯನ್ನು ಯಾರೂ ಕದಿಯಲಾರರು, ಹಾಗೆಯೇ ವಿದ್ಯೆಯನ್ನು ಕರೀದಿಸಲಾಗದು, ನಮ್ಮನ್ನು ರೂಪಿಸಿಕೊಳ್ಳುವ ಹೊಣೆ ನಮ್ಮ ಮೇಲಿರುತ್ತದೆ ಎಂದು ಶಿಕಾರಿಪುರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಾಮ್ಯಾನಾಯ್ಕ ತಿಳಿಸಿದರು. ಶಿರಾಳಕೊಪ್ಪ ಸರ್ಕಾರಿ ಹೆಣ್ಣುಮಕ್ಕಳ ಪದವಿ ಪೂರ್ವಕಾಲೇಜಿನ ಕ್ರೀಡಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮ ಉದ್ಘಾಟನೆ ಮತ್ತು ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಕಾಲೇಜು ಸಮಿತಿ ಉಪಾಧ್ಯಾಕ್ಷೆ ಗಂಗಮ್ಮ ಉದ್ಘಾಟಿಸಿದರು. ಬಸವರಾಜಪ್ಪ, ಅಂಜನಾಮೂರ್ತಿ ಉಪಸ್ಥಿತರಿದ್ದರು. ಸಂಘಕ್ಕೆ ಆಯ್ಕೆಯಾದ ಕು. ವನಜಾಕ್ಷಿ, ಲಕ್ಷ್ಮಿ, ಶಕೀನಾಬಾನು, ಸಹನ, ಸೀಮಾ, ಸುಧಾರಾಣಿ ಅವರನ್ನು ಅಭಿನಂದಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು.