ಕಿಮ್ಮನೆ ಸಂಪುಟದಿಂದಕೈಬಿಡದಂತೆ ಒತ್ತಾಯ
ಶಿವಮೊಗ್ಗ: ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಸಂಪುಟದಿಂದ ಕೈಬಿಡಬಾರದೆಂದು ಶಿವಮೊಗ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ನಿರ್ಣಯ ಕೈಗೊಂಡು ಕೆಪಿಸಿಸಿಯನ್ನು ಒತ್ತಾಯಿಸಿದೆ. ಸಮಿತಿ ಸಭೆಯಲ್ಲಿ ಕಿಮ್ಮನೆಯವರನ್ನು ಸಚಿವ ಸಂಪುಟದಲ್ಲಿ ಮುಂದುವರೆಸುವ ಮೂಲಕ ಪ್ರಾಮಾಣಿಕ ಹಾಗೂ ಸ್ವಚ್ಛ ಆಡಳಿತಕ್ಕೆ ಬೆಂಬಲಿಸಬೇಕು ಎಂದು ಆಗ್ರಹಿಸಲಾಯಿತು. ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಬಗ್ಗೆ ಉಗ್ರ ಕ್ರಮ ಕೈಗೊಳ್ಳುವುದು ಹಾಗೂ ಇತರೆ ಶಾಖೆಗಳಲ್ಲೂ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆಯನ್ನು ನಡೆಸಲು ಅಗತ್ಯ ಕ್ರಮ ಕೈಗೊಳ್ಳುವುದು. ಡಿಸಿಸಿ ಬ್ಯಾಂಕ್ ಇತರೆ ಶಾಖೆಗಳಲ್ಲೂ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆಯನ್ನು ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ರುದ್ರೇಶ್, ಆರ್.ಪ್ರಸನ್ನಕುಮಾರ್, ಮಮತಾ ಸಿಂಗ್, ಬಿ.ಎ.ರಮೇಶ್ ಹೆಗಡೆ, ಶಿವಾನಂದ ಮತ್ತಿತರರು ಸಭೆಯಲ್ಲಿದ್ದರು.