ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಗಿಡಮರ ಪೋಷಿಸಿ ಬೆಳೆಸುವುದು ಮಾನವೀಯತೆ'

Rashmi Kasaragodu
Updated On : 27 Jul 2014, 11:02 am

ಸೊರಬ: ಗಿಡಮರಗಳನ್ನು ಪೋಷಿಸಿ ಬೆಳೆಸುವುದು ಮಾನವೀಯತೆ ಎಂದು ತಾ. ಎಸ್ಕೆಡಿಆರ್‌ಡಿಪಿ ಯೋಜನಾಧಿಕಾರಿ ಸತೀಶ್ ಎಂ. ತಿಳಿಸಿದರು. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ವಲಯ ಮಟ್ಟದ ಪರಿಸರ ಜಾಥಾ ಮತ್ತು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜನರು ಪರಿಸರ ಸ್ನೇಹಿಗಳಾಗುವಂತೆ ಜಾಗೃತಗೊಳಿಸುವ ಉದ್ದೇಶ ಯೋಜನೆಯದ್ದಾಗಿದೆ ಎಂದರು. ಪಪಂ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ರೇವಣ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಧ್ಯಾ, ಕೃಷಿ ಅಧಿಕಾರಿ ಮಹಾಂತೇಶ್, ಮುಖ್ಯ ಶಿಕ್ಷಕಿ ಪಾರ್ವತಮ್ಮ, ಮೇಲ್ವಿಚಾರಕ ಮಂಜುನಾಥ, ಸೇವಾ ಪ್ರತಿನಿಧಿಗಳಾದ  ಸುಷ್ಮಾ, ಸುಧಾಮಣಿ, ಜಸಿಂತಾ ನಾಗರಾಜ, ಎಸ್‌ಡಿಎಂಸಿ ಸದಸ್ಯ ಬಸವರಾಜ, ಗಣೇಶಪ್ಪ,  ಸೇರಿದಂತೆ ಸಂಘದ ಸದಸ್ಯರು, ವಿದ್ಯಾರ್ಥಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement