ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಳೆ ಅನಾಹುತ: ಪರಿಹಾರಕ್ಕೆಮಂಜುನಾಥ ಒತ್ತಾಯ

Rashmi Kasaragodu
Updated On : 27 Jul 2014, 11:02 am

ಸೊರಬ: ತಾಲೂಕಿನಾದ್ಯಂತ ಅನೇಕ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆನಾಶ ವಾಗಿದ್ದು, ಜತೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ಜಿಲ್ಲಾ ಕೆ.ಡಿ.ಪಿ. ಸದಸ್ಯ ಹಾಗೂ ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಮಂಜುನಾಥ ಕಳವಳ ವ್ಯಕ್ತಪಡಿಸಿದ್ದಾರೆ. ಅವರು, ವರದಾನದಿ ಪ್ರವಾಹ ಉಲ್ಬಣಗೊಂಡಿರುವ ಪರಿಣಾಮ ತಾಳಗುಪ್ಪ, ಚಂದ್ರಗುತ್ತಿ ಮತ್ತು ಜಡೆ ಹೋಬಳಿಯ ರೈತ ವರ್ಗ ತತ್ತರಿಸಿದೆ. ಬಿತ್ತನೆ ಎಲ್ಲವೂ ಸಂಪೂರ್ಣ ಮುಳುಗಿ ರೈತ ಸಂಕಷ್ಟದಲ್ಲಿದ್ದಾನೆ. ರಸ್ತೆ ಸಂಪರ್ಕ ಕೆಲವೆಡೆ ಕಡಿದು ಹೋಗಿದ್ದಲ್ಲದೆ ಕೆರೆಕಟ್ಟೆಗಳು ಅಲ್ಲಲ್ಲಿ ಒಡೆದು ಹೋಗಿವೆ. ಸುಮಾರು 4 ರಿಂದ 5 ಕೋಟಿ ರು. ಹಾನಿಯಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಅಡಕೆಗೆ ಕೊಳೆ ರೋಗ ತಗುಲಿದ್ದು ಸ್ಥಳ ಪರಿಶೀಲನೆ ಮಾಡಬೇಕು. ಕೂಡಲೇ ಪರಿಹಾರದ ಮೊತ್ತ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement