ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಮಾನ ಭಾವನೆ ರಂಜಾನ್ ಆಶಯ: ಇನಾಯತ್ ವುಲ್ಲಾ

Rashmi Kasaragodu
Updated On : 27 Jul 2014, 11:03 am


ಸೊರಬ: ಆಂತರ್ಯದ ಭಿನ್ನತೆ ತೊಡೆದು ಪರಸ್ಪರ ಸಹೋದರ ಭಾವನೆಯೊಂದಿಗೆ ಉಳ್ಳವರು ಕೆಳ ಸ್ಥರದಲ್ಲಿ ಬದುಕುತ್ತಿರುವವರಿಗೆ ಧನ ಹಾಗೂ ದಾನ್ಯ ಸಹಾಯ ನೀಡುವುದರ ಮೂಲಕ ರಂಜಾನ್ ಆಚರಣೆಯನ್ನು ಸಮಾನ ಭಾವದಿಂದ ಆಚರಿಸಬೇಕು ಎಂಬುದು ಮುಖ್ಯ ಉದ್ದೇಶ ಸಮಾಜದ್ದು ಎಂದು ಜಮಾ-ಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷ ಎಂ. ಇನಾಯತ್‌ವುಲ್ಲಾ ತಿಳಿಸಿದರು. ಪಟ್ಟಣದ ದಾರುಸ್ಸಲಾಂ ಶಾದಿ ಮಹಲ್‌ನಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್ ಸೊರಬ ಘಟಕದಿಂದ ವಿಧವೆಯರು ಮತ್ತು ಬಡವರಿಗೆ ರಂಜಾನ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ರಂಜಾನ್ ಕಿಟ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಪಟ್ಟಣ ವ್ಯಾಪ್ತಿಯಲ್ಲಿ ಬದುಕುತ್ತಿರುವ ನಿರ್ಗತಿಕರು, ಬಡವರು ಹಾಗೂ ವಿಧವೆಯವರ ಬಗ್ಗೆ ಸಮೀಕ್ಷೆ ನಡೆಸಿ, ಅಗತ್ಯವಾಗಿ ಬೇಕಾಗುವ ಪರಿಕರಗಳನ್ನು ರಂಜಾನ್ ಕಿಟ್ ಹೆಸರಿನಲ್ಲಿ ವಿತರಿಸಲಾಗುತ್ತಿದೆ ಎಂದರು.
ಎಚ್‌ಆರ್‌ಎಸ್ ಸಂಚಾಲಕ ಮೊಹಮ್ಮದ್ ಶಬುದ್ಧೀನ್, ನಸ್ರುಲ್ಲಾ ಖಾನ್, ಅಬ್ದುಲ್ ರಫಿಸಾಬ್, ಮೊಹಮ್ಮದ್ ಇಮ್ತಿಯಾಝ್, ಮೊಹಮ್ಮದ್ ಯಾಸೀನ್, ಅಬ್ದುಲ್ ರಶೀದ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement