ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಾಂತ ಚುನಾವಣೆಗಾಗಿ ಸಿಆರ್‌ಪಿ ಮತ್ತು ಆರ್‌ಎಪಿ ತಂಡದ ಪಥಸಂಚಲನ

Rashmi Kasaragodu
Updated On : 29 Jul 2014, 10:41 am

ಶಿರಾಳಕೊಪ್ಪ: ರಾಜ್ಯದಲ್ಲಿ ಶಿಕಾರಿಪುರ ತಾಲೂಕಿನ ಉಪ-ಚುನಾವಣೆ ಎಲ್ಲರ ಗಮನ ಸೆಳೆದಿದ್ದು, ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಗುರುತಿಸಿಕೊಂಡಿರುವ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಚುನಾವಣೆ ಶಾಂತ ರೀತಿಯಿಂದ ನಡೆಸಲು ಸಿಆರ್‌ಪಿ ಮತ್ತು ಆರ್‌ಎಪಿ ತಂಡದ ಪಥಸಂಚಲನ ನಡೆಸಿದರು.ಚುನಾವಣೆ ಸಂದರ್ಭದಲ್ಲಿ ಮತದಾರರು ಯಾವುದೇ ಆತಂಕವಿಲ್ಲದೇ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ನಿರಾತಂಕವಾಗಿ ಮತಚಲಾಯಿಸಲು ಹಾಗು ಆತಂಕ ಒಡ್ಡುವವರಿಗೆ ಎಚ್ಚರಿಕೆ ನೀಡಲು ಈ ಪಥಸಂಚಲನ ನಡೆಸಲಾಗಿದೆ ಎನ್ನಲಾಗಿದೆ.
ಈ ಬಾರಿಯ ಉಪ ಚುನಾವಣೆ ಅತ್ಯಂತ ಕುತೂಹಲ ನಿರ್ಮಿಸಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ತಮ್ಮ ಚಟುವಟಿಕೆ ಪ್ರಾರಂಭಿಸಿದ್ದು, ಇಡೀ ರಾಜ್ಯದ ಕಣ್ಣು ಶಿಕಾರಿಪುರ ತಾಲೂಕಿನ ಕಡೆ ಎದುರು ನೋಡುತ್ತಿದ್ದು, ಚುನಾವಣೆ ಈ ಬಾರಿ ಹಿಂದಿಗಿಂತ ಹೆಚ್ಚು ಗಮನಸೆಳೆದಿದೆ.  ಬೆಳಗ್ಗೆ 11ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಗು ಪ್ರತಿ ಚುನಾವಣೆಯಲ್ಲಿ ಗಲಾಟೆ ನಡೆಯುವ ಸ್ಥಳಗಳಲ್ಲಿ ಪಥಸಂಚಲನ ನಡೆಸಲಾಯಿತು. ಅವರೊಂದಿಗೆ ಪಟ್ಟಣದ ಪೊಲೀಸ್ ಸಿಬ್ಬಂದಿ ಜೊತೆಗಿದ್ದರು. ಎಸ್‌ಐ ಶಿವಕುಮಾರ್ ಪರೇಡ್‌ನಲ್ಲಿ ಮುಂದೆ ಇದ್ದು ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement