ನಿಮ್ಮ ಮಗಳೋ, ಮೊಮ್ಮಗಳೋ ಅತ್ಯಾಚಾರವಾಗಿದ್ದರೆ ಸುಮ್ಮನಿರುತ್ತಿದ್ದಿರಾ?
ಶಿಕಾರಿಪುರ: ನಿಮ್ಮ ಮಗಳು- ಮೊಮ್ಮಗಳು ಅತ್ಯಾಚಾರಕ್ಕೆ ಒಳಗಾಗಿದ್ದರೆ ಗಂಡಸರಾಗಿ ನೀವು ಸುಮ್ಮನಿರುತ್ತಿದ್ದೀರಾ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳನ್ನು ಕಟುಶಬ್ದಗಳಲ್ಲಿ ಪ್ರಶ್ನಿಸಿದರು.
ಗುರುವಾರ ಶಿಕಾರಿಪುರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಲವರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದರೂ ರಾಜ್ಯ ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡುತ್ತಿದೆಯೇ ಹೊರತು ಇಂದಿಗೂ ಒಬ್ಬ ಅಪರಾಧಿ ಜೈಲಿನಲ್ಲಿಲ್ಲ ಎಂದರು.
ಈ ಬಗ್ಗೆ ಶಾಸನಸಭೆಯಲ್ಲಿ ಪ್ರಶ್ನಿಸಿದರೆ ಮುಖ್ಯಮಂತ್ರಿ ಗೃಹಮಂತ್ರಿಗಳು ಆರೋಪಿಗಳು ಎಷ್ಟೇ ಬಲಿಷ್ಠರು, ಪ್ರಭಾವಶಾಲಿಗಳಾಗಿದ್ದರೂ ಬಂಧಿಸಿ ಕಠಿಣ ಶಿಕ್ಷೆ ನೀಡುವುದಾಗಿ ಭರವಸೆ ನೀಡಿದ್ದರೂ ಅದು ಇನ್ನೂ ಕಾರ್ಯಗತವಾಗಿಲ್ಲ ಎಂದು ಹೇಳಿದರು.