ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಗರ್‌ಹುಕುಂಗೆ ಸಾಗುವಳಿ ಪತ್ರ

Mainashree
Updated On : 1 Aug 2014, 10:25 am

ಶಿಕಾರಿಪುರ: ಬಗರ್‌ಹುಕುಂ ಸಾಗುವಳಿದಾರರೇ ಆತಂಕ ಬಿಡಿ, ಕಠಿಣ ಕಾನೂನು ಸಡಿಲಗೊಳಿಸಿ ಕಾನೂನಿನ ಚೌಕಟ್ಟಿನಲ್ಲಿ ಸಾಗುವಳಿ ಪತ್ರ ವಿತರಿಸಲು ಆಗಬೇಕಾದ ಪ್ರಯತ್ನವನ್ನು ಲೋಕಸಭೆಯಲ್ಲಿ ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ಸಂಸದ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಶಿಕಾರಿಪುರ ಉಪ ಚುನಾವಣೆಗೆ ಬಿ.ವೈ. ರಾಘವೇಂದ್ರ ನಾಮಪತ್ರ ಸಲ್ಲಿಸಿದ ನಂತರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಗರ್ ಹುಕುಂ ಸಾಗುವಳಿದಾರರ ಪರವಾಗಿ ನಾನು ಮುಂಚಿಂದಲೂ ಹೋರಾಟ ಮಾಡಿಕೊಂಡು ಬಂದವನು. ಸಾಗುವಳಿದಾರರ ಪರವಾಗಿ ಸಂಸತ್‌ನಲ್ಲಿ ದನಿ ಎತ್ತಿ ಸಾಗುವಳಿದಾರರಿಗೆ ಅನುಕೂಲವಾಗುವಂತೆ ಕಾನೂನಿನಲ್ಲಿ ತಿದ್ದುಪಡಿ ಮಾಡಿಸಲು ಪ್ರಯತ್ನ ಮಾಡುತ್ತೇನೆಂದು ಹೇಳಿದರು.
ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವ ಜಿ.ಎಂ ಸಿದ್ದೇಶ್ ಮಾತನಾಡಿ, ಅಧಿಕಾರವಧಿಯಲ್ಲಿ ಎಲ್ಲ ವರ್ಗದ ಜನೆತೆಗೆ ಯೋಜನೆ ರೂಪಿಸಿ ಜಾರಿಗೊಳಿಸಿದ ಯಡಿಯೂರಪ್ಪ ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆ ಹಾಗೂ ಇಡೀ ರಾಜ್ಯಕ್ಕೆ ವರದಾನವಾಗಿದ್ದು ಪುನಃ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು  ಜನತೆ ಬಯಸುತ್ತಿದ್ದಾರೆ ಎಂದರು.
ಮಾಜಿ ಸಚಿವ ಸಿ.ಎಂ ಉದಾಸಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಮೋದಿ ಹಾಗೂ ಬಿಜೆಪಿ ವಿರುದ್ಧ ಅಪಪ್ರಚಾರವನ್ನು ವ್ಯವಸ್ಥಿತವಾಗಿ ನಡೆಸಲಾದರೂ ದೇಶ ಮೆಚ್ಚುವ ರೀತಿಯ ಆಡಳಿತದಿಂದಾಗಿ ಯಡಿಯೂರಪ್ಪನವರು ಅತಿ ಹೆಚ್ಚಿನ ಅಂತರದಿಂದ ಜಯಗಳಿಸಿದರು ಎಂದರು.
ಅಭ್ಯರ್ಥಿ ರಾಘವೇಂದ್ರ ಮಾತನಾಡಿ, ಸಾಗುವಳಿದಾರರ ಪರವಾದ, ಜೀತಮುಕ್ತಿಗಾಗಿ ಹೋರಾಟ ಮತ್ತಿತರ ಹಲವು ಹೋರಾಟಗಳಿಂದ ಯಡಿಯೂರಪ್ಪನವರು ರಾಜ್ಯದಲ್ಲಿ ಪಕ್ಷವನ್ನು ಪುರಸಭೆಯಿಂದ ರಾಷ್ಟ್ರಮಟ್ಟದಲ್ಲಿ ಕಟ್ಟುವ ಪ್ರಾಮಾಣಿಕ ಪ್ರಯತ್ನವನ್ನು ಕೈಗೊಂಡಿದ್ದು ಅಧಿಕಾರವಧಿಯಲ್ಲಿ ಎಲ್ಲಾ ವರ್ಗದ ಜನತೆಗೆ ಸಮಪಾಲು ಸಮಬಾಳು ಎಂಬ ರೀತಿಯಲ್ಲಿ ಯೋಜನೆ ರೂಪಿಸಿದರು ಎಂದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ  ಮಾಜಿ ಸಚಿವರಾದ ರೇಣುಕಾಚಾರ್ಯ, ಬಸವಣ್ಯಪ್ಪ, ಹರತಾಳು ಹಾಲಪ್ಪ, ಜೀವರಾಜ್, ಮಾಜಿ ಶಾಸಕರಾದ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, ಮಾಡಾಳ್ ವಿರೂಪಾಕ್ಷಪ್ಪ ವಿಧಾನಪರಿಷತ್ ಸದಸ್ಯರಾದ ಎಂ.ಬಿ. ಭಾನುಪ್ರಕಾಶ್, ಸಿದ್ದರಾಮಣ್ಣ, ಮುಖಂಡರಾದ ಭಾರತಿ ಶೆಟ್ಟಿ, ಶೇಖರಪ್ಪ, ಮಹಾಲಿಂಗಪ್ಪ, ಮೌಲಾನಾ ಅಮ್ಜದ್ ಹುಸೇನ್, ಗುರುಮೂರ್ತಿ, ಮುಕುಡಪ್ಪ ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement