ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರೈಲು ರಾಣೇಬೆನ್ನೂರಿಗೆ ಬೇಡ, ಹಾನಗಲ್‌ಗೆ ಹೋಗಲಿ: ಬಿಎಸ್‌ವೈ

Mainashree
Updated On : 7 Jun 2014, 10:22 am

ಶಿವಮೊಗ್ಗ: 2012-13ರ ಕೇಂದ್ರ ರೇಲ್ವೆ ಬಜೆಟ್‌ನಲ್ಲಿ ಘೋಷಿಸಿದ್ದ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೇಲ್ವೆ ಮಾರ್ಗದ ಸಮೀಕ್ಷಾ ಕಾರ್ಯ ಇನ್ನೂ ಕೈಗೆತ್ತಿಕೊಳ್ಳದಿರುವ ಹಿನ್ನೆಲೆಯಲ್ಲಿ ಈ ಮಾರ್ಗದ ಬದಲಿಗೆ ಶಿವಮೊಗ್ಗ-ಶಿಕಾರಿಪುರ-ಹಾನಗಲ್-ತಡಸ-ಮಾರ್ಗವಾಗಿ ಹುಬ್ಬಳ್ಳಿಗೆ ರೇಲ್ವೆ ಮಾರ್ಗದ ಸಮೀಕ್ಷಾ ಕಾರ್ಯವನ್ನು ಈ ವರ್ಷದ ಆಯವ್ಯಯದಲ್ಲಿ ಘೋಷಿಸುವಂತೆ ಸಂಸದ ಬಿ.ಎಸ್. ಯಡಿಯೂರಪ್ಪ ಕೇಂದ್ರ ರೇಲ್ವೆ ಖಾತೆ ಸಚಿವ ಡಿ.ವಿ. ಸದಾನಂದ ಗೌಡರನ್ನು ಕೋರಿದ್ದಾರೆ.
ಇದರಿಂದಾಗಿ ಶಿವಮೊಗ್ಗದಿಂದ ಹುಬ್ಬಳ್ಳಿಯ ದೂರ 200 ಕಿ.ಮೀ.ಗಿಂತಲೂ ಕಡಿಮೆಯಾಗಲಿದೆ ಎಂದಿದ್ದಾರೆ.
ಮಾಜಿ ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ಭೇಟಿಯಾಗಿ ಹಲವು ಮುಂಬರುವ ರೇಲ್ವೆ ಆಯವ್ಯಯದಲ್ಲಿ ಪ್ರಸ್ತಾಪಿಸಬೇಕಾಗಿರುವ ಹಲವು ವಿಷಯಗಳನ್ನು ಅವರಿಗೆ ಬೇಡಿಕೆ ಪಟ್ಟಿ ಸಲ್ಲಿಸಿರುವ ಅವರು, 2012-13ರ ಕೇಂದ್ರ ರೇಲ್ವೆ ಆಯವ್ಯದಲ್ಲಿ ಘೋಷಿಸಿರುವ ಬೀರೂರು-ಶಿವಮೊಗ್ಗ ನಡುವಣ ರೈಲು ಡಬ್ಲಿಂಗ್ ಸಮೀಕ್ಷಾ ಕಾರ್ಯ ಮುಗಿದಿರುವುದರಿಂದ, ಈ ಮಾರ್ಗವನ್ನು ಅನುಷ್ಠಾನಗೊಳಿಸಲು ಅನುದಾನವನ್ನು ಕಲ್ಪಿಸುವಂತೆ ಕೋರಿದ್ದಾರೆ.
 ಗೋವಾ, ಪೂನಾ, ಮುಂಬಯಿ ಮತ್ತು ಗುಜರಾತ್‌ಗೆ ಅತ್ಯಂತ ಸಮೀಪ ಮಾರ್ಗವಾಗಿ ತಾಳಗುಪ್ಪದಿಂದ ಹೊನ್ನಾವರಕ್ಕೆ ಹೊಸ ರೇಲ್ವೆ ಮಾರ್ಗವನ್ನು ಅಳವಡಿಸಿ ಕೊಂಕಣ ರೇಲ್ವೆಗೆ ಸಂಪರ್ಕ ಕಲ್ಪಿಸಿ ಎಂದು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement