ವಿಶ್ವ ಪರಿಸರ ದಿನಾಚರಣೆ
ಚನ್ನಗಿರಿ: ದಿನದಿಂದ ದಿನಕ್ಕೆ ಪರಿಸರ ಹಾಳಾಗುತ್ತಿದ್ದು, ಪ್ರತಿಯೊಬ್ಬ ನಾಗರಿಕರು ಒಂದೊಂದು ಮರಗಿಡಗಳನ್ನು ಬೆಳೆಸಿದರೆ ಸಾಕು, ಊರುಗಳು ಹಸಿರಿನಿಂದ ಕಂಗೊಳಿಸುತ್ತವೆ ಎಂದು ಶಾಸಕ ವಡ್ನಾಳ್ ರಾಜಣ್ಣ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಅಂಗವಾಗಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶಗಳಿಂದ ಹಿಡಿದು ಪಟ್ಟಣಗಳ ವರೆಗೆ ಕಾಂಕ್ರಿಟ್ ಕಾಡುಗಳು ನಿರ್ಮಾಣವಾಗುತ್ತಿದ್ದು, ನಿಜವಾದ ಮರಗಿಡಗಳು ಕಣ್ಮರೆಯಾಗುತ್ತಿವೆ ಎಂದರು.
ಮರಗಿಡಗಳನ್ನು ರಕ್ಷಣೆ ಮಾಡದಿದ್ದರೆ ಮತ್ತು ಬೆಳೆಸದಿದ್ದರೆ ಮುಂದೆ ದೊಡ್ಡ ದುರಂತ ಅನುಭವಿಸುವ ಕಾಲ ದೂರವಿಲ್ಲ ಎಂದರು.
ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಾಂಡೋಮಟ್ಟಿ ಲೋಕಣ್ಣ ಮಾತನಾಡಿ, ಮರಗಿಡಗಳು ಮನುಷ್ಯನ ಜೀವನಾಡಿಗಳಾಗಿದ್ದು, ಪ್ರತಿಯೊಬ್ಬರೂ ಇವುಗಳನ್ನು ಕಡಿಯದೆ ಪೋಷಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರಪ್ಪ, ಮುಖಂಡ ಶಿವಕುಮಾರ್, ವಡ್ನಾಳ್ ಜಗದೀಶ್, ಕೆ.ಆರ್. ಮಂಜುನಾಥ್ ಸೇರಿದಂತೆ ಈ ಸಂದರ್ಭದಲ್ಲಿ ಹಲವರು ಉಪಸ್ಥಿತರಿದ್ದರು.