ಸಿಗಂಧೂರಿಗೆ ಬಸ್ ಸೌಲಭ್ಯಕ್ಕೆ ಮನವಿ
ಸಾಗರ: ಸಿಗಂದೂರಿಗೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕು ಬಿಜೆಪಿ ಘಟಕದಿಂದ ಡಿಪೋ ಮುಖ್ಯಸ್ಥ ರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ಜಿಲ್ಲಾ ಮುಖಂಡ ಟಿ.ಡಿ.ಮೇಘರಾಜ್ ಮಾತನಾಡಿ, ಕಳೆದ 2 ತಿಂಗಳಿನಿಂದ ಸಾಗರ-ಹೊಳೆಬಾಗಿಲು-ಸಿಗಂದೂರಿಗೆ ಸಂಚರಿಸುತ್ತಿದ್ದ ಸಾರಿಗೆ ಬಸ್‌ನ್ನು ನಿಲ್ಲಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ವಿವರಿಸಿದರು. ಎಪಿಎಂಸಿ ಉಪಾಧ್ಯಕ್ಷ ಬಿ.ಎ.ಇಂದೂಧರ ಗೌಡ ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಡಿತಗೊಳಿಸಿರುವುದರಿಂದ ಹೊಳೆಬಾಗಿಲು, ಅಂಬಾರಗೋಡ್ಲು, ಕೋಳೂರು, ಹುಲಿದೇವರಬನ, ಗೆಣಸಿನಕುಣಿ, ಆವಿನಹಳ್ಳಿ ಜನತೆ ಸಾರಿಗೆ ಬಸ್ ಸೌಲಭ್ಯದಿಂದ ವಂಚಿತರಾಗುವಂತೆ ಆಗಿದೆ ಎಂದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯು.ಎಚ್.ರಾಮಪ್ಪ,ರಾಮಚಂದ್ರಭಟ್, ಪ್ರಕಾಶ್‌ಕುಂಠೆ, ಗಣೇಶಪ್ರಸಾದ್ ಇತರರಿದ್ದರು.