ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಡ ಕಚೇರಿಯಲ್ಲಿ ಕಂದಾಯ ಆದಾಲತ್

Vishwanath S
Updated On : 11 Jun 2014, 11:27 am

ಶಿರಾಳಕೊಪ್ಪ:  ಶಿರಾಳಕೊಪ್ಪ ಪಟ್ಟಣ ಸೇರಿದಂತೆ ಇಲ್ಲಿಯ ನಾಡ ಕಚೇರಿಯಲ್ಲಿ ಹಲವಾರು ಗ್ರಾಮಗಳು ಒಳಗೊಂಡಂತೆ ನಡೆದ ಪಿಂಚಣಿ ಮತ್ತು ಕಂದಾಯ ಆದಾಲತ್ ಕಾರ್ಯಕ್ರಮದಲ್ಲಿ ಹಲವಾರು ರೈತರಿಗೆ ಮತ್ತು ನೊಂದವರಿಗೆ ಸ್ಥಳದಲ್ಲಿ ಪರಿಹಾರ ಕೊಡಿಸುವ ಕಾರ್ಯ ಮಂಗಳವಾರ ನಡೆಯಿತು.
ಉಪವಿಭಾಗಾದಿಕಾರಿ ಉದಯಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ  ಗ್ರಾಮಗಳಿಂದ ಆಗಮಿಸಿದ ರೈತರ ಮತ್ತು ವಿವಿಧ ಯೋಜನೆಯ ಫಲಾನುಭವಿಗಳು ತಮ್ಮ ಸಮಸ್ಯೆ ಹೇಳುತ್ತಿದ್ದಂತೆಯೇ ಸ್ಥಳದಲ್ಲಿ ಸಮಸ್ಯೆ ಬಗೆಹರಿಸುವ ಕಾರ್ಯನಡೆಯಿತು.
ಮಂಚಿಕೊಪ್ಪದ ನೀಲಮ್ಮ ಎಂಬುವವರು 3 ಹೆಣ್ಣು ಮಕ್ಕಳನ್ನು ಕೂಲಿ ಮಾಡಿ ಸಾಕುತ್ತಿರುವ ಹಾಗೂ ಪತಿಯನ್ನು ಕಳೆದುಕೊಂಡಿರುವ ನನಗೆ ಕಳೆದು 5 ತಿಂಗಳಿಂದ ವಿಧವಾ ವೇತನ ನಿಲ್ಲಿಸಲಾಗಿದೆ ಎಂಬ ದೂರನ್ನು ಆಲಿಸುತ್ತಿದ್ದಂತೆಯೇ ಉಪ ವಿಭಾಗಾದಿಕಾರಿ ಉದಯ ಕುಮಾರ್ ಶೆಟ್ಟಿ ಸಂಬಂಧಿಸಿದ ಸಿಬ್ಬಂದಿಯನ್ನು ಕರೆಸಿ ವಿಚಾರಿಸಿ, ಅವರು ಕೊಟ್ಟ ಹಳೇ ದಾಖಲೆ ಆಧಾರದ ಮೇಲೆ ಅವರಿಗೆ ವೇತನಪತ್ರ ಕೊಡುವಂತೆ ಆದೇಶಿಸಿದರು.
ಹಾಗೆಯೇ ಅದೇ ಗ್ರಾಮದ ಪಾರ್ವತಮ್ಮ ಎಂಬುವವರ ಸಂಧ್ಯಾ ಸುರಕ್ಷಾ ಯೋಜನೆ ನಿಲ್ಲಿಸಿದ ಕಾರಣ ತುಂಬಾ ತೊಂದರೆ ಆಗಿದೆ. ನಾನು ಕೊಟ್ಟ ಅರ್ಜಿ ಸರಿ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೇಳಿದಾಗ ಉಪ ವಿಭಾಗಾಧಿಕಾರಿಗಳು ಖುದ್ದು ಪರಿಶೀಲಿಸಿ ಮುಂದಿನ ತಿಂಗಳಿಂದ ವೇತನ ಬರುವ ಹಾಗೆ ಆದೇಶ ಇತ್ತರು.
ಅದಾಲತ್‌ನಲ್ಲಿ ಕಂದಾಯ ಇಲಾಖೆಯ ಪಹಣಿ, ಕೆರೆ ಕಾಮಗಾರಿ ಮಾಡದಿರುವುದರಿಂದ ಆಗುವ ಅನಾಹುತಗಳ ಬಗ್ಗೆ ಅವರ ಗಮನಕ್ಕೆ ತರಲಾಯಿತು. ತಾವು ಕೊಟ್ಟ ಅರ್ಜಿಯನ್ನು ಅಧಿಕಾರಿಗಳು ಪರಿಣಮಿಸಿಲ್ಲ ಎಂಬ ಅರ್ಜಿ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರು.
ಅದಾಲತ್ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಗದೀಶ್, ಉಪತಹಸೀಲ್ದಾರ್ ಆನಂದ ಗರಡಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ದಾನೇರ್, ಪಪಂ ಮಾಜಿ ಅಧ್ಯಕ್ಷ ಲೋಕಣ್ಣ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement