ಹಾಲಪ್ಪ ಸಲಹೆ ಹಾಸ್ಯಾಸ್ಪದ: ಕಾಂಗ್ರೆಸ್
ಸಾಗರ: ಮಾಜಿ ಸಚಿವ ಎಚ್.ಹಾಲಪ್ಪ ಸರ್ಕಾರ ಘೋಷಿಸಿರುವ 94ಸಿ ಅಡಿ ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸಲು ಸಮಯ ವಿಸ್ತರಣೆ ಮಾಡುವಂತೆ ಸರ್ಕಾರದ ಕಿವಿ ಹಿಂಡಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ನೀಡಿರುವ ಸಲಹೆ ಹಾಸ್ಯಾಸ್ಪದವಾಗಿದೆ ಎಂದು ತಾ. ಯುವ ಕಾಂಗ್ರೆಸ್ ಅಧ್ಯಕ್ಷ ಭೀಮನೇರಿ ಆನಂದ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಬಲೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಕೆ ವಸ್ತು ಹರಾಜು
ಸೊರಬ: ಜೂ. 12ರ ಗುರುವಾರ ತಾಲೂಕು ಚಂದ್ರಗುತ್ತಿಯ ರೇಣುಕಾಂಬಾ ದೇವಾಲಯ ಕಚೇರಿ ಆವರಣದಲ್ಲಿ ದೇವರಿಗೆ ಬಂದಂತಹ ಹರಕೆ ರೂಪದಲ್ಲಿ ಬಂದಂತಹ ವಸ್ತುಗಳನ್ನು ಬಹಿರಂಗವಾಗಿ ಹರಾಜು ಮಾಡಲಾಗುವುದು ಎಂದು ಮುಜರಾಯಿ ಇಲಾಖೆ ಪ್ರಕಟಿಸಿದೆ.
ವಿಳಂಬವಾದಲ್ಲಿ ವಸ್ತುಗಳು ಹಾಳಾಗುವ ಸಂಭವವಿರುವುದರಿಂದ ತುರ್ತಾಗಿ ಈ ವಸ್ತುಗಳನ್ನು ಹರಾಜು ಕರೆಯಲಾಗಿದೆ.
70 ಕ್ವಿಂ. ಅಕ್ಕಿ, 50 ಕೆ.ಜಿ.ಸಕ್ಕರೆ, 2,500 ತೆಂಗಿನಕಾಯಿ, 52 ಎಣ್ಣೆಡಬ್ಬ, 50 ಕೆ.ಜಿ.ಬೆಲ್ಲ, 5 ಚೀಲ ಬಳೆ, 50 ಹಿತ್ತಾಳೆ ಘಂಟೆ, 6 ಕರು ಮತ್ತು ಮೇಕೆ, 8 ಸಾವಿರ ಸೀರೆ, 15 ಸಾವಿರ ಕಣ ಹರಾಜಿಗಿದೆ, ಸಾರ್ವಜನಿಕರು ಗಮನಿಸಬೇಕು ಎಂದು ತಿಳಿಸಿದೆ.