ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಾಸಕ ಪ್ರಸನ್ನಕುಮಾರ್‌ಗೆ ಸಹ್ಯಾದ್ರಿ ಸ್ನೇಹ ಸಂಘ ಮನವಿ

Vishwanath S
Updated On : 12 Jun 2014, 11:53 am

ಶಿವಮೊಗ್ಗ: ನೆಹರು ಕ್ರೀಡಾಂಗಣದ ವಾಕಿಂಗ್ ಟ್ರ್ಯಾಕ್ ದುರಸ್ತಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸ್ವಚ್ಚತೆಗೆ ಅದ್ಯತೆ ನೀಡಬೇಕೆಂದು ಆಗ್ರಹಿಸಿ ಸಹ್ಯಾದ್ರಿ ಸ್ನೇಹ ಸಂಘದ ಸದಸ್ಯರು ಬೆಳಿಗ್ಗೆ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರಿಗೆ ಮನವಿ ಅರ್ಪಿಸಿದರು.
ಪ್ರತಿನಿತ್ಯ ನೂರಾರು ಜನರು, ವಯೋವೃದ್ಧರು ನೆಹರೂ ಕ್ರೀಡಾಂಗಣಕ್ಕೆ ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ಆಗಮಿಸಿ ವಾಕಿಂಗ್, ದೈಹಿಕ ವ್ಯಾಯಾಮ, ಧ್ಯಾನ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಹಾಗಾಗಿ ಇಲ್ಲಿ ಸ್ವಚ್ಚತೆ ಕಾಪಾಡಿ ಉಬ್ಬು, ತಗ್ಗುಗಳಿರುವ ವಾಕಿಂಗ್ ಟ್ರ್ಯಾಕ್‌ನ್ನು ಸರಿಪಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಂತು ಜಾರುವ ಈ ಟ್ರ್ಯಾಕ್‌ನಲ್ಲಿ ನಡೆದಾಡುವುದು ದುಸ್ತರವಾಗಿದೆ. ಆದ್ದರಿಂದ ಸ್ವಚ್ಚತೆಗೆ ಆದ್ಯತೆ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಸಂಘ ಶಾಸಕರಲ್ಲಿ ಮನವಿ ಮಾಡಿದೆ. ಪಾಲಿಕೆ ಸದಸ್ಯ ಕಾಶಿ ವಿಶ್ವನಾಥ್, ಜಿಲ್ಲಾ ಕ್ರೀಡಾಧಿಕಾರಿ ಚಂದ್ರಶೇಖರ್, ಪಿ.ರುದ್ರೇಶ್ ಶ್ರೀಕಂಠ ಪ್ರಸಾದ್ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement