ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರೈತರ ಹೊಲಗಳಿಗೂ ಬರಲಿವೆ ರೋಬೋಟ್

Lingaraj Badiger
Updated On : 14 Jun 2014, 11:08 am

ಶಿವಮೊಗ್ಗ: ಕೃಷಿಗೆ ಭವಿಷ್ಯದಲ್ಲಿ ಕೆಲಸಗಾರರ ಸಮಸ್ಯೆ ಬಗ್ಗೆ ಸಮಾಜದಲ್ಲಿ ಚರ್ಚೆಯಾಗುತ್ತಿದೆ. ಈ ಸಮಸ್ಯೆ ಪರಿಹಾರ ಸಿಗಬಹುದೆಂಬ ಆಶಾಭಾವನೆಯನ್ನು ನಮ್ಮ ಭಾವಿ ವಿಜ್ಞಾನಿಗಳು ಹುಟ್ಟಿಹಾಕಿದ್ದಾರೆ.
ಇಲ್ಲಿನ ಜವಾಹರ ಲಾಲ್ ನೆಹರೂ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶುಕ್ರವಾರ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ವಿಭಾಗವು ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯಲ್ಲಿ ಕೃಷಿ ಸಂಬಂಧಿತ ಕೆಲಸಗಳಿಗೆ ಸಹಕಾರ ನೀಡುವ ರೋಬೋಟ್ ಗಮನ ಸೆಳೆಯಿತು.
ಹಣ್ಣು ಕೊಯ್ಯುವ ಒಂದು ರೋಬೋಟ್ ಅಲ್ಲಿ ಪ್ರದರ್ಶನಗೊಂಡಿತ್ತು. ಮಾಗಿದ ಹಣ್ಣುಗಳನ್ನು ಹುಡುಕಿ ಕೀಳುತ್ತದೆ. ಮಾತ್ರವಲ್ಲ, ಶೇಖರಣಾ ಸ್ಥಳಕ್ಕೆ ಸಾಗಿಸುವಲ್ಲಿ ಸಹಕಾರ ನೀಡಲಿದೆ, ಇನ್ನೊಂದು ರೋಬೋಟ್ ಕೂಡ ಗಮನ ಸೆಳೆಯುತ್ತಿತ್ತು. ಅದೇ ರೀತಿ ಅಪಘಾತ ಪತ್ತೆ ಮತ್ತು ಜಾಣ್ಮೆಯ ಸಂಚಾರ ಲೈಟ್ ವ್ಯವಸ್ಥೆ, ಬಹೂಪಯೋಗಿ ಅಗ್ರಿ ರೋಬೋಟ್ ಅಲ್ಲಿದ್ದವು.
ಹಣ್ಣು ಕೀಳುವ ರೋಬೋಟ್‌ಅನ್ನು ಕಾಲೇಜಿನ ಪ್ರೊ.ಮಂಜುನಾಥ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಪಿ.ಮನು, ಆರ್. ಮಂಜುನಾಥ್, ಬಿ.ಎನ್.ಸುನಿಲ್ ಕುಮಾರ್, ವಿಜಯ್ ಕುಮಾರ್ ಸಿದ್ಧಪಡಿಸಿದ್ದಾರೆ.  ಬಿತ್ತನೆ ಮಾಡುವ ರೋಬೋಟ್ ಹೊಲಗಳಲ್ಲಿ ಕುಳಿಗಳನ್ನು ತಾನಾಗಿಯೇ ಗುರುತಿಸುವ ಮೂಲಕ ಪೂರ್ವ ನಿರ್ಧಾರಿತ ಸಂಖ್ಯೆಗಳಷ್ಟು ಬೀಜಗಳನ್ನು ಬಿತ್ತನೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಮಾದರಿಯನ್ನು ವಿದ್ಯಾರ್ಥಿಗಳಾದ ಸೋಫಾನ್ ಬಿ. ಉತ್ತರ್ಕರ್, ಮಂಜುಪ್ರಕಾಶ್, ಎಸ್.ಎಂ.ವಾಗೀಶ್, ಜೆ.ಆರ್.ಸಂತೋಷ್ ಸಿದ್ಧದ್ಧಪಡಿಸಿದ್ದಾರೆ.  
ಮಲ್ಟಿಪರ್ಪಸ್ ಅಗ್ರಿಬೋಟ್ ಕೃಷಿಗೆ ಸಹಕಾರಿಯಾಗುವ ಯಂತ್ರವಾಗಿದೆ. ಕಾಲೇಜಿನ ಅನಿಲ್ ಕುಮಾರ್ ಜೆ. ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಎಂ.ಎಂ.ಗುರುರಾಜ್, ನಿತೀಶ್ ಚೌವ್ಹಾಣ್, ಶಹಬಾಜ್ ಅಹಮದ್, ಶ್ರೇಯಸ್ ಈ ರೋಬೋಟ್ ಸಜ್ಜುಗೊಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement