ಉಚಿತ ಆರೋಗ್ಯ ಶಿಬಿರ
ಹೊಸನಗರ: ಗ್ರಾಹಕರ ಆರ್ಥಿಕ ಭದ್ರತೆ ಜೊತೆಗೆ ಆರೋಗ್ಯ ರಕ್ಷಣೆ ಕಾಳಜಿ ಕೂಡಾ ಕೆನರಾ ಬ್ಯಾಂಕಿಗಿದೆ ಎಂದು ಶಾಖಾ ಪ್ರಬಂಧಕ ಕೆ.ಶ್ರೀನಿವಾಸಲು ಹೇಳಿದರು. ತಾಲೂಕಿನ ನಗರ-ಚಿಕ್ಕಪೇಟೆ ಶಾಖೆಯಲ್ಲಿ ಬ್ಯಾಂಕ್ ಗ್ರಾಹಕರಿಗೆ ಉಚಿತವಾಗಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆನರಾ ಬ್ಯಾಂಕ್ ಸಾರ್ವಜನಿಕ ಸಂಪರ್ಕಾಧಿಕಾರಿ ಸತೀಶ್ ಶ್ರೀರಂಗ, ಯಡೂರು ಡಾ.ಮಾರುತಿ ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು. ಹೆಚ್ಚಿನ ಗ್ರಾಹಕರು ಶಿಬಿರದ ಪ್ರಯೋಜನ ಪಡೆದುಕೊಂಡರು.
ಪ್ರಮುಖರಾದ ಕಿಶೋರ್, ರಮೇಶ ಉಡುಪ, ಗೋಪಾಲಶೆಟ್ಟಿ, ಸುಮನಾ ನಗರ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಮಸ್ಥರುಉಪಸ್ಥಿತರಿದ್ದರು.