ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ತಾಂತ್ರಿಕತೆಯಲ್ಲಿ ಕೆನರಾ ಬ್ಯಾಂಕ್ ಮುಂದು: ಶಿವರಾಮು ಅಭಿಮತ

Rashmi Kasaragodu
Updated On : 18 Jun 2014, 11:01 am

ಭದ್ರಾವತಿ: ತಾಂತ್ರಿಕ ಬೆಳವಣಿಗೆಯನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವಲ್ಲಿ ಕೆನರಾ ಬ್ಯಾಂಕ್ ದೇಶದಲ್ಲಷ್ಟೇ ಅಲ್ಲದೆ ವಿದೇಶದಲ್ಲೂ ಹೆಸರುವಾಸಿಯಾಗಿದೆ ಎಂದು ಕೆನರಾ ಬ್ಯಾಂಕಿನ ಶಿವಮೊಗ್ಗ ವೃತ್ತದ ಉಪಮಹಾಪ್ರಬಂಧಕ ಎಚ್.ಶಿವರಾಮು ತಿಳಿಸಿದರು.
ಪಟ್ಟಣದ ವಿಐಎಸ್‌ಎಲ್ ಅತಿಥಿಗೃಹದ ಸಭಾಂಗಣದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಎಚ್‌ಎನ್‌ಐ ಗ್ರಾಹಕರ ಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂತಹ ಗ್ರಾಹಕರ ಸಭೆಗಳನ್ನು ಏರ್ಪಡಿಸುವುದರ ಮೂಲಕ ಕೆನರಾ ಬ್ಯಾಂಕ್ ಗ್ರಾಹಕರ ಸಂಬಂಧ ಸುಧಾರಣೆ ಮಾಡಿಕೊಳ್ಳುವುದರೊಂದಿಗೆ ಠೇವಣಿ ಸಂಗ್ರಹಣೆಯನ್ನು ರು. 974 ಕೋಟಿ ಹೆಚ್ಚಳ ಮಾಡಿಕೊಂಡಿದೆ.
2013-14ರಲ್ಲಿ 1022 ಶಾಖೆಗಳನ್ನು ಹೊಂದಿದ್ದ ಬ್ಯಾಂಕ್ ಈಗ 2784 ಶಾಖೆಗಳನ್ನು ಹಾಗೂ 6300 ಎಟಿಎಂ ಕಿಯೋಸ್ಕ್‌ಗಳನ್ನು ಹೊಂದಿದೆ. 2015 ಮಾರ್ಚ್ ಅಂತ್ಯದ ವೇಳೆಗೆ 6000 ಶಾಖೆಗಳನ್ನು ತೆರೆಯುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ಕಳೆದ ವಿತ್ತವರ್ಷದಲ್ಲಿ ಬ್ಯಾಂಕ್ ರು. 1.27 ಲಕ್ಷ ಕೋಟಿ ವಹಿವಾಟು ನಡೆಸಿ, ರು. 4.21 ಲಕ್ಷ ಕೋಟಿ ಠೇವಣಿ ಸಂಗ್ರಹಿಸಿದೆ. ಭದ್ರಾವತಿ ಜನ್ನಾಪುರದಲ್ಲಿ ನೂತನ ಶಾಖೆ ಆರಂಭಿಸಿ ಇನ್ನೂ ಒಂದು ವರ್ಷವಾಗದಿದ್ದರೂ ರು. 17 ಕೋಟಿ ವಹಿವಾಟು ನಡೆಸಲಾಗಿದೆ. ಹಾಗಾಗಿ ಭದ್ರಾವತಿಯಲ್ಲಿ ಮತ್ತೊಂದು ಶಾಖೆ ತೆರೆಯುವ ಬಗ್ಗೆ ಚಿಂತಿಸಲಾಗುತ್ತಿದೆ. ಭದ್ರಾವತಿ ಎಲ್ಲ ಶಾಖೆಗಳಲ್ಲೂ ಗ್ರಾಹಕರೇ ಪಾಸ್ ಪುಸ್ತಕ ಮುದ್ರಿಸಿಕೊಳ್ಳುವ ಯಂತ  ಅಳವಡಿಸಲಾಗುವುದು ಎಂದು ತಿಳಿಸಿದರು.
ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಸತೀಶ್ಚಂದ್ರ ಶೆಟ್ಟಿ  ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಅನುಪಮಾ ಪ್ರಾರ್ಥಿಸಿದರು. ನಾಗಭೂಷಣ ಕಾರ್ಯಕ್ರಮ ನಿರೂಪಿಸಿದರು. ಭದ್ರಾವತಿ ಮುಖ್ಯ ಶಾಖೆಯ ಹಿರಿಯ ಪ್ರಬಂಧಕ ಉದಯಕುಮಾರ್ ವಂದಿಸಿದರು.
ಬ್ಯಾಂಕಿನ ಮೂರೂ ಶಾಖೆಗಳ ಪ್ರಬಂಧಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement