ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಂಚನೆಗೀಡಾದ ಹೂಡಿಕೆದಾರರಿಗೆ ಸೂಕ್ತ ರಕ್ಷಣೆ: ಕುಮಾರ್ ಭರವಸೆ

Rashmi Kasaragodu
Updated On : 18 Jun 2014, 11:01 am

ಶಿವಮೊಗ್ಗ:  ಸ್ವಯಂ ಕೃಷಿ ಸೌಹಾರ್ದ ಕ್ರೆಡಿಟ್ ಸಹಕಾರ ಸಂಸ್ಥೆಯಿಂದ ವಂಚನೆಗೊಳಗಾದ ಹೂಡಿಕೆದಾರರು ಆತಂಕಪಡುವ ಅಗತ್ಯವಿಲ್ಲ. ಕಾನೂನು ಚೌಕಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು ಹೂಡಿಕೆದಾರರಿಗೆ ರಕ್ಷಣೆ ನೀಡುವುದಾಗಿ ಕೋ-ಆಪರೇಟಿವ್ ಸೊಸೈಟಿ ಸಮಾಪನಾಧಿಕಾರಿ ವೈ.ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸ್ವಯಂ ಕೃಷಿ ಸಂಸ್ಥೆಯಿಂದ ರಾಜ್ಯದಲ್ಲಿ ಹಲವು ಠೇವಣಿದಾರರಿಗೆ ವಂಚನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ತಮ್ಮನ್ನು ಸಮಾಪನಾಧಿಕಾರಿಯಾಗಿ ಮಾಡಿತ್ತು. ಇದೀಗ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಮುಂದೆ ಸಂಸ್ಥೆಗೆ ಸೇರಿದ ಆಸ್ತಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗುತ್ತದೆ. ಚಿತ್ರದುರ್ಗದ ಬಳಿ 300 ಎಕರೆ, ಹೊಸಕೋಟೆ ಬಳಿ 8.5 ಎಕರೆ ಜಮೀನು ಸೇರಿದಂತೆ ಇತರ ಹಲವು ಆಸ್ತಿ ಪತ್ತೆಯಾಗಿದೆ. ನ್ಯಾಯಾಲಯದ ಆದೇಶ ಹೊರಬಿದ್ದ ನಂತರ ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಠೇವಣಿದಾರ ಹಿತ ಕಾಯಲಾಗುವುದು ಎಂದರು. ಇಡೀ ರಾಜ್ಯದಲ್ಲಿ ಸಂಸ್ಥೆಯಿಂದ 30 ಕೋಟಿ ಅವ್ಯವಹಾರವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 1 ಕೋಟಿ ಅವ್ಯವಹಾರವಾಗಿದೆ. ಹಣ ಕಳೆದುಕೊಂಡವರು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement