ಸೂಡಾ ಹಗರಣ ಸಿಬಿಐಗೆ ವಹಿಸಲು ಆಗ್ರಹ
ಶಿವಮೊಗ್ಗ: ಸೂಡಾ ನಿವೇಶನ ಹಗರಣವನ್ನು ಸಿಬಿಐಗೆ ವಹಿಸಲು ಕ್ರಮ ಕೈಗೊಳ್ಳುವಂತೆ ಅಣ್ಣಾ ಹಜಾರೆ ಹೋರಾಟ ಸಮಿತಿ ಹಾಗೂ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿದೆ.
ಮಂಗಳವಾರ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರಿಗೆ ಮನವಿ ಸಲ್ಲಿಸಿದ ಸಂಘಟನೆ ಸದಸ್ಯರು, ಸೂಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆಸಿರುವ ತಪ್ಪಿತಸ್ಥರ ವಿರುದ್ಧ ಮೊದಲು ಎಫ್ಐಆರ್ ದಾಖಲಿಸಬೇಕೆಂದೂ ಸಹ ಒತ್ತಾಯಿಸಿದರು. ವಾಜಪೇಯಿ ಬಡಾವಣೆಯ 1163 ನಿವೇಶನಗಳ ಹಂಚಿಕೆಯಲ್ಲಿ 813 ನಿವೇಶನ ಹಂಚಿಕೆಯಲ್ಲಿ ಅವ್ಯವಹಾರವಾಗಿದೆ ಎಂದರು.
ಮನವಿ ನೀಡುವ ಸಂದರ್ಭ ಕಲ್ಲೂರು ಮೇಘರಾಜ್, ಅಶೋಕ್ ಯಾದವ್, ರವಿ, ರಾಜು, ಅರ್ಜುನ, ಆಶಾ, ಮಂಜುಳ, ಸತೀಶ್, ನಾಗೇಶ್, ಸಂದೇಶ, ರಮೇಶ್ ಮತ್ತಿತರರು ಇದ್ದರು.