ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಒತ್ತುವರಿ ತೆರವಿಗೆ ಮನವಿ

Rashmi Kasaragodu
Updated On : 19 Jun 2014, 11:39 am

ಸೊರಬ: ತಾಲೂಕು ಆನವಟ್ಟಿ ಹೋಬಳಿ ಜೋಗಿಹಳ್ಳಿ ಗ್ರಾಮಸ್ಥರು ಗ್ರಾಮದ ಗೋಮಾಳ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಸನಂ 47, 53, 54ರ ಜಾಗ ಗೋಮಾಳವಾಗಿದ್ದು, ಈಚೆಗೆ ಇಲ್ಲಿನ ಕೆಲವರು ಒತ್ತ್ತುವರಿ ಮಾಡಿದ್ದು, ಜಾನುವಾರುಗಳ ಮೇವಿಗೆ ಕಲ್ಲುಹಾಕಿದ್ದಾರೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ದೂರು ಸಲ್ಲಿಸಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಈಗ ನಾಲ್ಕಾರು ದಿನಗಳ ಹಿಂದೆ ಇಲ್ಲಿನ ಕೆಲವರು ಮಧ್ಯರಾತ್ರಿಯಲ್ಲಿ ಜೆಸಿಬಿ ಬಳಸಿ ಗೋಮಾಳದಲ್ಲಿನ ಗಿಡಗಳನ್ನು ಕೀಳಿಸಿದ್ದಾರೆ. ಇವರ ವಿರುದ್ಧ ಕೂಡಲೆ ಕಾನೂನು ಕ್ರಮ ಕೈಗೊಂಡು, ಗೋಮಾಳದ ಪೂರ್ಣ ಸರ್ವೆ ನಡೆಸಿ, ಗಡಿಗುರುತು ಮಾಡಿಕೊಡಿ ಎಂದು ಮನವಿ ಸಲ್ಲಿಸಿದ್ದಾರೆ.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಟಿ. ಕೆ. ತಿಪ್ಪೂರಾವ್ ಅವರು ಮಾತನಾಡಿ, ಸ್ಥಳ ಪರಿಶೀಲನೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಭೂಮಿಯನ್ನು ಯಾರೆ ಕಬಳಿಸಿದ್ದರೂ ಸಧ್ಯದಲ್ಲಿಯೆ ತೆರವು ಗೊಳಿಸುವ ಕೆಲಸಕ್ಕೆ ಇಲಾಖೆ ಮುಂದಾಗುತ್ತದೆ. ತುಸು ಸಮಯಾವಕಾಶ ಬೇಕು ಎಂದರು.
ಗ್ರಾಮದ ಎಂ. ವಿ. ವೀರೇಂದ್ರ, ಹೆಚ್. ಜಿ. ಹನುಮಗೌಡ, ಎಸ್.ಹೆಚ್.ರವಿ, ಜೆ.ಎಸ್.ಜಯಶೀಲಪ್ಪ, ಎಲಿವಾಳದ ಸೋಮಶೇಖರಯ್ಯ ಮುಂತಾದವರು ಮನವಿ ಸಲ್ಲಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement