ಕಾಂಪೌಂಡ್ ಒಡೆಸಿದ ಕಿರಿಯ ಅಭಿಯಂತರ!
ಸೊರಬ: ಪಟ್ಟಣದ ಪಿಡಬ್ಲೂಡಿ ಕಾಲೋನಿಯಲ್ಲಿ ವಸತಿ ಗೃಹದಲ್ಲಿ ಅಧಿಕಾರಿಯೊಬ್ಬರು ಕಾರು ನಿಲ್ಲಿಸಲು ಕಾಂಪೌಂಡ್ ಕೆಡವಿನದ ಘಟನೆ ನಡೆದಿದೆ.
ಕಾಲೋನಿಯಲ್ಲಿ 20 ಸರ್ಕಾರಿ ವಸತಿ ಗೃಹಗಳಿದ್ದು, ವಿವಿಧ ಇಲಾಖಾ ಅಧಿಕಾರಿಗಳು, ಅಭಿಯಂತರರು, ಸಿಬ್ಬಂದಿ ವಾಸವಾಗಿದ್ದಾರೆ. ಇಲ್ಲಿ ವಾಸವಾಗಿರುವ ಪಿಡಬ್ಲ್ಯೂಡಿ ಕಿರಿಯ ಅಭಿಯಂತರರು 15 ದಿನಗಳ ಹಿಂದೆ ತಮ್ಮ ಕಾರು ನಿಲ್ಲಿಸುವ ಸಲುವಾಗಿ ಮೇಲಧಿಕಾರಿಗಳ ಅನುಮತಿ ಪಡೆಯದೇ ಗಟ್ಟಿಮುಟ್ಟಾದ ಕಾಂಪೌಂಡ್ ಗೋಡೆ ಒಡೆದು ಹಾಕಿದ್ದಾರೆ.
ದುಸ್ಥಿತಿಯಲ್ಲಿರುವ ಯಾವುದೇ ಸರ್ಕಾರಿ ವಸತಿ ಗೃಹ ನವೀಕರಿಸಲು ಇಲಾಖಾ ಅಧಿಕಾರಿಗಳ ಅನುಮತಿ ಬೇಕಾಗುತ್ತದೆ. ಆದರೆ ಅಭಿಯಂತರರು ಯಾವುದೇ ಅನುಮತಿ ಪಡೆಯದೇ ತಮ್ಮ ಸ್ವಂತ ಕಾರು ನಿಲ್ಲಿಸುವುದಕ್ಕಾಗಿ ಕಾಂಪೌಂಡ್ ಗೋಡೆ ಒಡೆದು ವಿಕಾರಗೊಳಿಸಿದ್ದಾರೆ. ಇಂದು ಕಾರು ನಿಲ್ಲಿಸಲು ಸರ್ಕಾರಿ ವಸತಿ ಗೃಹ ಒಡೆದಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೊಬ್ಬ ಅಧಿಕಾರಿ ಇನ್ನೇನನ್ನೋ ಒಡೆಯುತ್ತಾರೆ. ಇದು ಹೀಗೆ ಮುಂದುವರೆಯುತ್ತದೆ