ಕಿರಿಯ ವೈದ್ಯರ ರಕ್ತದಾನ ಶಿಬಿರ
ಶಿವಮೊಗ್ಗ: ಶಿವಮೊಗ್ಗ ವೈದ್ಯಕೀಯ ವಿಜ್ಞಾಗಳ ಸಂಸ್ಥೆ (ಸಿಮ್ಸ್)ನಲ್ಲಿ ಜೂ.19ರಂದು ಬೆಳಗ್ಗೆ 9 ಗಂಟೆಗೆ ಇದೇ ಮೊದಲ ಬಾರಿಗೆ ಕಿರಿಯ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸ ವರ್ಗದವರಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ನಡೆಯುವ ಈ ರಕ್ತದಾನ ಶಿಬಿರದಲ್ಲಿ ಮೆಗ್ಗಾನ್ ಆಸ್ಪತ್ರೆಯ ರೋಗಿಗಳಿಗಾಗಿ ಹಾಗೂ ತಾಯಿ ರಕ್ಷಣೆಗಾಗಿ ರಕ್ತದಾನ ಎಂಬ ಘೋಷಣೆಯೊಂದಿಗೆ 150ಕ್ಕೂ ಹೆಚ್ಚು ಕಿರಿಯ ವೈದ್ಯರು ರಕ್ತದಾನ ಮಾಡಲಿದ್ದಾರೆ ಎಂದು ವೈದ್ಯ ಪ್ರಬುದೇವ್ ಎಂ. ಹಿರೇಮಠ್ ತಿಳಿಸಿದ್ದಾರೆ.