ಶಾಲೆಗಳಿಗೆ ಫಿಲ್ಟರ್ ವಿತರಣೆ
ಹೊಸನಗರ: ಯಾವುದೇ ಸಂಸ್ಥೆಯಲ್ಲಿ ಸಮಾಜಮುಖಿ ಚಿಂತನೆಯಿಂದ ಪಾಲ್ಗೊಂಡಲ್ಲಿ ಮಾತ್ರ ಜನ ಮೆಚ್ಚುಗೆ ಪಡೆಯಲು ಸಾಧ್ಯ ಎಂದು ಕೆನರಾ ಬ್ಯಾಂಕ್ ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರ ಬಿ.ಆರ್. ಕೃಷ್ಣಮೂರ್ತಿ ಹೇಳಿದರು.
ಕೆನರಾ ಬ್ಯಾಂಕ್ ಆಲಗೇರಿಮಂಡ್ರಿ ಶಾಖೆಯ ವತಿಯಿಂದ ಬುಧವಾರ ಸ್ಥಳೀಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಕುಡಿಯುವ ಶುದ್ಧ ನೀರಿಗಾಗಿ ಫಿಲ್ಟರ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದೇ ಸಂದರ್ಭ ಶಾಖಾ ವ್ಯವಸ್ಥಾಪಕ ಬಿ.ಆರ್.ಶ್ರೀಕಾಂತ್, ಆಲಗೇರಿ ಮಂಡ್ರಿ ಕ್ಲಸ್ಟರ್ ವ್ಯಾಪ್ತಿಯ 7 ಶಾಲೆಗಳಿಗೆ ಉಚಿತ ಫಿಲ್ಟರ್ ವಿತರಿಸಲಾಯಿತದು. ಮುಖ್ಯ ಶಿಕ್ಷಕ ಹರೀಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಿಆರ್ಪಿ ಪ್ರಸನ್ನಕುಮಾರ್ ನಿರೂಪಿಸಿದರು.