ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆರ್ಯವೈಶ್ಯ ಒಕ್ಕೂಟದಿಂದ ಅಂತಾರಾಜ್ಯ ಸಾಂಸ್ಕ ೃತಿಕ ಮಿಲನ

Rashmi Kasaragodu
Updated On : 21 Jun 2014, 11:20 am

ಶಿವಮೊಗ್ಗ: ಅಖಿಲ ಭಾರತ ಆರ್ಯ ವೈಶ್ಯ ಒಕ್ಕೂಟವು ಜೂ.23ರಿಂದ 25ರವರೆಗೆ ಅಂತರರಾಜ್ಯ ಸಾಂಸ್ಕೃತಿಕ ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಆರ್ಯ ವೈಶ್ಯ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಶೇಷಾಚಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಸ್ಕೃತಿಕ ಮಿಲನ ಕಾರ್ಯಕ್ರಮದಲ್ಲಿ ಕೇರಳ, ಮಹಾರಾಷ್ಟ್ರ, ತಮಿಳುನಾಡು ಮತ್ತು ಒರಿಸ್ಸಾ ರಾಜ್ಯಗಳಿಂದ ಯುವಕ, ಯುವತಿಯರು ಆಗಮಿಸಲಿದ್ದಾರೆ. ಪ್ರತೀ ರಾಜ್ಯದಿಂದ 10ರಿಂದ 14 ಜನ ಪಾಲ್ಗೊಳ್ಳಲಿದ್ದು, ಸುಮಾರು 45 ಪ್ರತಿನಿಧಿಗಳು 8 ದಿನಗಳ ಕಾಲ ರಾಜ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದರು.
ಶಿವಮೊಗ್ಗದಲ್ಲಿ ನಾಲ್ಕು ದಿನಗಳ ಕಾಲ ಪ್ರತಿನಿಧಿಗಳು ವಾಸ್ತವ್ಯ ಹೂಡಲಿದ್ದು, ಪ್ರತಿದಿನ ಬೆಳಿಗ್ಗೆ 6ರಿಂದ ಮಧ್ಯಾಹ್ನ 1 ಗಂಟೆವರೆಗೆ ಶಿವಮೊಗ್ಗದ ಸುತ್ತಮುತ್ತಲಿನ ಸ್ಥಳಗಳ ವೀಕ್ಷಣೆ ಹಾಗೂ ಅಧ್ಯಯನ ಕೈಗೊಳ್ಳಲಿದ್ದಾರೆ. ಪ್ರತಿದಿನ 2 ಗಂಟೆಗಳ ಕಾಲ ಕರ್ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಅಧ್ಯಯನ ಹಾಗೂ ತರಬೇತಿ ಪಡೆಯುವರು. ಜತೆಗೆ ಕಲೆ, ಯೋಗ, ನೃತ್ಯ, ಸಂಗೀತ ಹಾಗೂ ನಾಟಕ ಕಲೆ ಕುರಿತು ತರಬೇತಿ ಪಡೆಯಲಿದ್ದಾರೆ.
ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನಗರದ ತರಕಾರಿ ಮಾರುಕಟ್ಟೆ, ಅಡಕೆ ಮಾರುಕಟ್ಟೆ ಹಾಗೂ ಸಾಗರ ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಅಲ್ಲದೇ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಮಹಾಜನ ಸಮಿತಿ ನೇತೃತ್ವದಲ್ಲಿ ಏರ್ಪಡಿಸಲಾಗಿರುವ ದೇವತಾ ಕಾರ್ಯಗಳಲ್ಲೂ ಪಾಲ್ಗೊಳ್ಳಲಿದ್ದಾರೆ ಎಂದರು.
ಕಾ.ರಾ.ನಾಗರಾಜ್, ನಿರ್ದೇಶಕ ಕೆ.ಜಿ.ನಟರಾಜ್, ಎಸ್.ವಿ.ದೀಪಕ್, ಕಾರ್ಯದರ್ಶಿ ಎಂ.ಜೆ. ಮಂಜುನಾಥ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement