ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಶಿವಮೊಗ್ಗ: ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸುವ ಬದಲು ಕಾಂಗ್ರೆಸ್ಸೇತರರನ್ನು ನೇಮಿಸಲಾಗಿದ್ದು, ಬದಲಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ವಕ್ಫ್ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಹಿಂದೆ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಪರ್ವೀಜ್ ಅಹ್ಮದ್ ಅವರನ್ನು ಸರ್ಕಾರ ಮತ್ತೆ ನೇಮಕ ಮಾಡಿದ್ದು, ಅವರು ಶುಕ್ರವಾರ ಬೆಳಿಗ್ಗೆ ದಿಢೀರನೇ ಕಚೇರಿಗೆ ಆಗಮಿಸಿದ ಅಧಿಕಾರ ಸ್ವೀಕರಿಸಿದರು. ವಿಷಯ ತಿಳಿದ ಕಾಂಗ್ರೆಸ್ ಕಾರ್ಯಕರ್ತರು ಮಧ್ಯಾಹ್ನದ ನಂತರ ವಕ್ಫ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಯದ್ ವಾಹಿದ್ ಅಡ್‌ಡು, ಪ್ರಮುಖರಾದ ಖಾಜಿ ಉಸ್ಮಾನ್, ಫರೀದಾ ಖಾನಂ, ಸೈಯದ್ ಅಬ್ದುಲ್ ರೆಹಮಾನ್, ಮಹಮ್ಮದ್ ಷಫೀ, ನಿಸಾರ್ ಅಹ್ಮದ್, ಆರೀಫುಲ್ಲಾ, ಅಹಮದ್, ಅನ್ವರ್ ಇದ್ದರು.