ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಟ್ರಾನ್ಸ್‌ಫಾರ್ಮರ್ ಮೇಲೆ ಮರ ಬೀಳುವ ಅಪಾಯ

Rashmi Kasaragodu
Updated On : 21 Jun 2014, 11:18 am

ಸೊರಬ: ಪಟ್ಟಣದ ಚಾಮರಾಜಪೇಟೆ ಬಡಾವಣೆಯ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಬೃಹತ್ ಮರವೊಂದು ಹತ್ತಿರದಲ್ಲಿಯೇ ಇರುವ ಟ್ರ್ಯಾನ್ಸ್‌ಫಾರ್ಮರ್ ಮೇಲೆ ಬೀಳುವಂತಿದೆ.
ರಸ್ತೆ ಬದಿ ಬೆಳೆದಿರುವ ಮರದ ರೆಂಬೆ-ಕೊಂಬೆಗಳು ಬಾಗಿದ್ದು, ಮುರಿದು ಬೀಳುವ ಸ್ಥಿತಿಯಲ್ಲಿದೆ. ಈ ಮಾರ್ಗವಾಗಿ ಬಸ್ಸು, ಲಾರಿಗಳು ಸಂಚರಿಸಿದರೆ ತಾಕುವಂತೆ ಬೆಳೆದಿದೆ. ಮರದ ಎದುರು ಭಾಗದಲ್ಲಿಯೇ ಮೆಸ್ಕಾಂನ ವಿದ್ಯುತ್ ಪರಿವರ್ತಕವಿದ್ದು, ಇದರ ಅನತಿ ದೂರದಲ್ಲಿ ಸ್ವಾಮಿ ವಿವೇಕಾನಂದ ಶಾಲೆಯೂ ಇದೆ. ಮರ ವಿದ್ಯುತ್ ಪರಿವರ್ತಕದ ಮೇಲೆ ಬಿದ್ದರೆ, ವಿದ್ಯುತ್ ಕಂಬ ಶಾಲಾ ಕಟ್ಟಡದ ಮೇಲೆ ಬಿದ್ದು, ಅಪಘಾತ ಸಂಭವಿಸುವ ಅಪಾಯವಿದೆ. ಅನಾಹುತ ಸಂಭವಿಸುವ ಮೊದಲು ಪಪಂ ಎಚ್ಚೆತ್ತುಕೊಂಡು ಮೆಸ್ಕಾಂ ಮತ್ತು ಅರಣ್ಯ ಇಲಾಖೆಯೊಂದಿಗೆ ಸೇರಿಕೊಂಡು ಬೃಹತ್ತಾಗಿ ಬೆಳೆದಿರುವ ರೆಂಬೆ- ಕೊಂಬೆಗಳನ್ನು ಕತ್ತರಿಸಬೇಕು ಎಂದು ನಿವಾಸಿ ದತ್ತಾತ್ರೇಯ ಸಲಹೆ ನೀಡಿದ್ದಾರೆ.  ಸರ್ಕಾರಿ ಮಾದರಿ ಬಾಲಿಕಾ ಪ್ರಾಥಮಿಕ ಶಾಲೆಯ ಸಮೀಪದಲ್ಲಿ ಮರವೊಂದರ ಬುಡ ಕೂಡಾ  ಸಂಪೂರ್ಣ ಒಣಗಿದ ಸ್ಥಿತಿಯಲ್ಲಿದೆ. ಅಂಬೇಡ್ಕರ್ ಭವನ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿ ವಸತಿ ನಿಲಯದ ಬಳಿಯೂ ಇದೇ ಸ್ಥಿತಿ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement