ವಿದ್ಯುತ್ ವ್ಯತ್ಯಯ
ಶಿವಮೊಗ್ಗ: ಹೊಳಲೂರು ಗ್ರಾಮದ 66.11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಕ್ಕೆ ತ್ರೈಮಾಸಿಕ ನಿರ್ವಹಣೆ ಕಾರ್ಯ ಇರುವುದರಿಂದ, ಹಲವು ಗ್ರಾಮಗಳಲ್ಲಿ 21ರಂದು ಬೆಳಗ್ಗೆ 9.30ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೊಳಲೂರು, ಹರಮಘಟ್ಟ, ಕೊಮ್ಮನಾಳ್, ಹೊಳೆಹಟ್ಟಿ, ಬೇಡರಹೊಸಳ್ಳಿ, ಕುಂಚೇನಹಳ್ಳಿ, ಬಿಕೋನಹಳ್ಳಿ, ಬುಳ್ಳಾಪುರ, ಬೂದಿಗೆರೆ, ಬೀರನಕೆರೆ, ಕಲ್ಲಾಪುರ, ಚೀಲೂರು, ಮಡಿಕೆ ಚೀಲೂರು, ಹಾಡೋನಹಳ್ಳಿ, ಸೂಗೂರು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಡಾ.ಭಾಸ್ಕರ್ ಪ್ರವಾಸ
ಶಿವಮೊಗ್ಗ: ಲೋಕಾಯುಕ್ತ ನ್ಯಾಯಮೂರ್ತಿ ಡಾ. ವೈ.ಭಾಸ್ಕರ್ ರಾವ್ 22ರ ಸಂಜೆ ನಗರದಕ್ಕೆ ಆಗಮಿಸಿ, 23ರ ಬೆಳಗ್ಗೆ 10.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಬಾಕಿಯಿರುವ ಪ್ರಕರಣಗಳ ಬಗ್ಗೆ ಜಿಲ್ಲಾ ವ್ಯಾಪ್ತಿಯಲ್ಲಿ ಈವರೆಗೆ ದಾಖಲಾಗಿ ವಿಲೇವಾರಿಯಾದ ಕಡತಗಳನ್ನು ಪರಿಶೀಲಿಸುವರು. ಬಳಿಕ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವರು.