ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಪಿಎಂಸಿ ಆಡಳಿತ ಕಚೇರಿ ಉದ್ಘಾಟನೆ

Rashmi Kasaragodu
Updated On : 22 Jun 2014, 11:43 am

ಸಾಗರ: ರಾಜ್ಯದಲ್ಲಿ ಕೃಷಿಕರ ಹಿತಕಾಯುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಬಜೆಟ್ಟಿನಲ್ಲಿ ಕೃಷಿ ಆಯೋಗ ರಚಿಸುವ ಭರವಸೆ ನೀಡಿದ್ದಾರೆ. ಆಯೋಗ ರಚಿಸಿ, ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಶುಕ್ರವಾರ ನೂತನ ಆಡಳಿತ ಕಚೇರಿಯನ್ನು ಉದ್ಘಾಟಿಸಿದ ಅವರು, ಕೃಷಿ ಆಯೋಗ ರಚಿಸುವ ಮೂಲಕ ರೈತರ ಉತ್ಪಾದನೆಗಳಿಗೆ ನ್ಯಾಯಯುತ, ಲಾಭದಾಯಕ ಬೆಲೆ ಸಿಗಬೇಕು ಹಾಗೂ ಆತಂಕದಲ್ಲಿರುವ ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಅಧ್ಯಕ್ಷ ಕೆ. ಹೊಳೆಯಪ್ಪ, ನೂತನ ಆಡಳಿತ ಕಚೇರಿಯನ್ನು ರು. 1.30 ಕೋಟಿ  ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ ಎಂದರು. ಜಿಪಂ ಪ್ರಭಾರ ಅಧ್ಯಕ್ಷ ಯಲ್ಲಪ್ಪ, ನಗರಸಭೆ ಅಧ್ಯಕ್ಷೆ ಲಲಿತಮ್ಮ, ತಾಪಂ ಅಧ್ಯಕ್ಷ ಹರೀಶ್ ಗಂಟೆ, ಶಿವಮೊಗ್ಗ ಕೃ, ಮಾರುಕಟ್ಟೆ ಸಮಿತಿ ಉಪ ನಿರ್ದೇಶಕ ವೀರೇಶ್, ಅಡಕೆ ವರ್ತಕರ ಸಂಘದ ಅಧ್ಯಕ್ಷ ಕೆ. ಬಸವರಾಜಪ್ಪ, ಎಪಿಎಂಸಿ ಉಪಾಧ್ಯಕ್ಷ ಕೆ.ಡಿ. ಜಿನದತ್ತ, ಹೊಸನಗರ ಎಪಿಎಂಸಿ ಅಧ್ಯಕ್ಷ ಆನಂದರಾವ್, ಶಿವಮೊಗ್ಗ ಎಪಿಎಂಸಿ ಅಧ್ಯಕ್ಷ ಷಣ್ಮುಖಪ್ಪ, ಸೊರಬ ಎಪಿಎಂಸಿ ಅಧ್ಯಕ್ಷ ತಬಲಿ ಬಂಗಾರಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement