ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಖ್ಯಾತ ವಿಮರ್ಶಕ ಜಿ.ಎಚ್. ನಾಯಕ್‌ಗೆ ತೀ.ನಂ.ಶ್ರೀ ಪ್ರಶಸ್ತಿ ಪ್ರದಾನ

Rashmi Kasaragodu
Updated On : 22 Jun 2014, 11:43 am

ಶಿವಮೊಗ್ಗ: ವಿಮರ್ಶೆಯನ್ನು ಸಹನೆಯಲ್ಲಿ ಸ್ವೀಕರಿಸುವ ಸ್ಥಿತಿ ಅವತ್ತಿಗೂ ಇರಲಿಲ್ಲ. ಇವತ್ತಿಗೂ ಇಲ್ಲ ಎಂದು ಖ್ಯಾತ ವಿಮರ್ಶಕ ಜಿ.ಎಚ್. ನಾಯಕ್ ಹೇಳಿದರು.
ನಗರದಲ್ಲಿ ಶನಿವಾರ ಸಂಜೆ ಕರ್ನಾಟಕ ಸಂಘ ವಿಮರ್ಶಾ ಕೃತಿಗೆ ಕೊಡಮಾಡುವ -ತೀ.ನಂ. ಶ್ರೀಕಂಠಯ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನವ್ಯ ಸಾಹಿತ್ಯದ ಬಗ್ಗೆ ತೀನಂಶ್ರೀ ಅವರು ವಾಚ್ಯದ ಮಟ್ಟದಲ್ಲಿದೆಯೇ ಹೊರತು ರಸಸ್ಥಿತಿಗೆ ಏರುವುದಿಲ್ಲ ಎಂದಿದ್ದರು. ಇದನ್ನು ಪ್ರಶ್ನಿಸಿ ಬರೆದ ವಿಮರ್ಶೆಯೇ ನನ್ನ ಮೊದಲ ಬರಹ ಎಂದ ಅವರು, ಈ ಬಗ್ಗೆ ನಾನು ಅವರಿಗೆ ನೇರವಾಗಿಯೂ ಪ್ರಶ್ನಿಸಿದ್ದೆ. ಅಡಿಗರ ಪ್ರಾರ್ಥನೆ ಕವನದ ಬಗ್ಗೆ ನನ್ನ ಹಾಗೂ ಅನಂತಮೂರ್ತಿ ಜತೆ ಚರ್ಚಿಸುವ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದರು ಎಂದು ನೆನಪಿಸಿಕೊಂಡರು. ಜಿ.ಎಚ್. ನಾಯಕ್ ಅವರ ಸಾಹಿತ್ಯ ಕುರಿತು ಲೇಖಕ ಜಿ.ಪಿ. ಬಸವರಾಜು ಮಾತನಾಡಿ, ನಿಷ್ಠುರವಾಗಿ ಮಾತನಾಡುವ  ನಾಯಕ್ ಅವರ ವಿಮರ್ಶೆಯ ನಿಲುವುಗಳು ಇವತ್ತಿಗೂ ಬದಲಾಗಿಲ್ಲ. ವಿಸ್ತಾರಗೊಂಡಿವೆ ಎಂದು ತಿಳಿಸಿದರು. ನ್ಯಾಯವಾದಿ ಕೃಷ್ಣಮೂರ್ತಿ ಸಿರ್ಸಿ ಮಾತನಾಡಿದರು. ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ತೀ.ನಂ. ಶಂಕರನಾರಾಯಣ ಅವರು ಪ್ರಶಸ್ತಿ ಪ್ರದಾನ ಮಾಡಿದರು.


ಬಸ್ಸು ಡಿಕ್ಕಿ: ಬೈಕ್ ಸವಾರ ಸಾವು
ಸಾಗರ: ತಾಲೂಕಿನ ತುಮರಿ ಬಳಿ ಬಸ್ಸು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಅಶೋಕ (40)  ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ತುಮರಿ ಸಮೀಪದ ಹಿನ್ಸೋಡಿ ವಾಸಿ ಅಶೋಕ ತಮ್ಮ ಹಿರೋಹೊಂಡ ಸ್ಪ್ಲೆಂಡರ್ ಬೈಕಿನಲ್ಲಿ ತುಮರಿಗೆ ಬರುತ್ತಿದ್ದಾಗ ಕೆರೆಕೈ ಸಮೀಪ ಎದುರಿನಿಂದ ಬಂದ ಸಾಗರ-ನಿಟ್ಟೂರು ಮಾರ್ಗದ ಖಾಸಗಿ ಬಸ್ಸು ಡಿಕ್ಕಿ ಹೊಡೆದಿದೆ. ಬೈಕ್ ನುಜ್ಜುಗುಜ್ಜಾಗಿದ್ದು, ಅಶೋಕ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement