ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವೀರಶೈವ ಜನಾಂಗ ಎಚ್ಚೆತ್ತುಕೊಳ್ಳಲಿ

Rashmi Kasaragodu
Updated On : 23 Jun 2014, 10:49 am


ಶಿವಮೊಗ್ಗ: ಇಂದು ವೀರಶೈವ ಧರ್ಮ, ಹಿಂದೂ ಸಂಸ್ಕೃತಿ ಬಗ್ಗೆ ಏನು ಮಾತನಾಡಿದರೂ ಯಾರೂ ಕೇಳುವುದಿಲ್ಲವೆಂದು ಬಾಯಿಗೆ ಬಂದಂತೆ ಮಾತನಾಡಿ ತಮ್ಮ ಹೆಗ್ಗಳಿಕೆ ಹೆಚ್ಚಿಸಿಕೊಳ್ಳುವವರಿದ್ದಾರೆ. ಇತ್ತೀಚೆಗೆ ಅಂತಹ ಘಟನೆ ನಡೆದಿದೆ. ಇನ್ನು ಮುಂದಾದರೂ ವೀರಶೈವ ಜನಾಂಗ ಮೈಕೊಡವಿ ಎಚ್ಚೆತ್ತುಕೊಂಡು ದುಷ್ಟ ಶಕ್ತಿಗಳನ್ನು ದಮನ ಮಾಡಲು ಪ್ರಾಮಾಣಿಕ ಪ್ರಯತ್ನ ಅಲ್ಲಲ್ಲಿ ನಡೆಯುತ್ತದೆ ಎಂದು ಭಾವಿಸುವುದಾಗಿ ಶ್ರೀಮದ್ ರಂಭಾಪುರಿ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.
ಪಂಚಾಚಾರ್ಯ ಐಟಿಐ ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧರ್ಮ-ಸಂಸ್ಕೃತಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ ನಂತರ ಯಾರಾದರೂ ಗಟ್ಟಿಯಾಗಿ ಪ್ರಶ್ನಿಸಿದರೆ ನಾನು ಹಾಗೆ ಹೇಳಿಲ್ಲ, ಮಾಧ್ಯಮಗಳು ತಪ್ಪಾಗಿ ಬರೆದಿವೆ ಎಂದು ಸಮಜಾಯಿಷಿ ನೀಡುತ್ತಾರೆ. ಗಟ್ಟಿಯಾಗಿ ಕೇಳಿದರೆ ಮೌನವಾಗಿಬಿಡುತ್ತಾರೆ ಎಂದರು.
ವೀರಶೈವ ಸಮಾಜ ಇಂದು ಹೊರಗಿನವರಿಗಿಂತ ಸಮಾಜದೊಳಗಿರುವವರಿಂದಲೇ ಹೆಚ್ಚು ಆತಂಕ ಎದುರಿಸುತ್ತಿದೆ ಎಂದು ಹೇಳಿದ ಅವರು, ನಾವು ಯಾರನ್ನು ವಿದ್ಯಾವಂತರು- ಬಹಳ ಬುದ್ಧಿವಂತರೆಂದು ತಿಳಿದಿದ್ದೇವೋ ಅಂತಹವರು ವೀರಶೈವ ಧರ್ಮವನ್ನು ಕಲುಷಿತ ಗೊಳಿಸುವ, ಚ್ಯುತಿ ತರುವ ಮಾತುಗಳನ್ನಾಡುತ್ತಿದ್ದಾರೆ. ಅಂತಹವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವೀರಶೈವ ಪಂರಪರೆಯ ಪಂಚಪೀಠ ಶಾಖಾ ಮಠಗಳು ಧರ್ಮ- ಸಂಸ್ಕೃತಿ- ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮತ್ತೊಮ್ಮೆ ವೀರಭದ್ರನಂತೆ ಗಟ್ಟಿ ಸಂಕಲ್ಪತೊಟ್ಟು ಭಕ್ತರ ಮನಸ್ಸು ಪರಿವರ್ತನೆ ಮಾಡುವಂತಹ, ಯೋಗ್ಯ ಸಂಸ್ಕಾರಗಳನ್ನು ಕೊಡುವಂತಹ ಧರ್ಮದ ಅರಿವನ್ನುಂಟುಮಾಡುವ ಕೆಲಸ ಮಾಡುವ ಅಗತ್ಯವಿದೆ ಎಂದು ಭಾವಿಸುವುದಾಗಿ ಹೇಳಿದರು.
ಡಾ. ಶಿವಾನಂದಯ್ಯ ಅವರು ರಚಿಸಿರುವ ಆರೋಗ್ಯವೇ ಭಾಗ್ಯ ಕೃತಿಯನ್ನು ವೃಷಬೇಂದ್ರ ಸ್ವಾಮಿ ಬಿಡುಗಡೆಗೊಳಿಸಿದರು.
ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಹಾರ್ನಹಳ್ಳಿಯ ಶಿವಾಚಾರ್ಯರು, ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ನಗರಪಾಲಿಕೆ ಸದಸ್ಯ ಎನ್.ಜೆ.ರಾಜಶೇಖರ್, ಟಿ.ಡಿ. ಮೇಘರಾಜ್, ಎನ್.ಜೆ. ರಾಜಶೇಖರ್, ವಿಘ್ನೇಶ್ವರಯ್ಯ ನೀ.ಸೋಲಾಪುರ್ ಮಠ ಕಾರ್ಯಕ್ರಮದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement