ಅಕ್ರಮ ದಾಸ್ತಾನು ಸಿಲಿಂಡರ್ ವಶ
ಶಿವಮೊಗ್ಗ: ಸೊರಬ ತಾಲೂಕು ಜಡೆ ಗ್ರಾಮದ ದೀಪಕ್ ಎಸ್. ಅವರು ಮನೆ ಮತ್ತು ಅಂಗಡಿ ಮಳಿಗೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೃಹಬಳಕೆಯ 15 ಸಿಲಿಂಡರ್ ಹಾಗೂ ಮಧು ಸ್ವೀಟ್ಸ್ (ಬೇಕರಿ) ಮಳಿಗೆಯಲ್ಲಿ ದಾಸ್ತಾನು ಮಾಡಿದ್ದ 20 ಸಿಲಿಂಡರ್ಗಳನ್ನು ಸೊರಬದ ಆಹಾರ ಶಿರಸ್ತೇದಾರರು ಹಾಗೂ ಆಹಾರ ನಿರೀಕ್ಷಕರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಇಲಾಖೆಯ ಇತರೇ ಸಿಬ್ಬಂದಿ ದಿಡೀರ್ ದಾಳಿ ನಡೆಸಿ, ವಶಕ್ಕೆ ಪಡೆದರು. ಕಾನೂನುಬಾಹಿರವಾಗಿ ಅಡುಗೆ ಅನಿಲ ಸಿಲಿಂಡರ್ ದಾಸ್ತಾನು ಮಾಡುವವರ ವಿರುದ್ಧ ಕಾನೂನು ಕ್ರಮ ಹಾಗೂ ದಂಡನೆಗೆ ಗುರಿಪಡಿಸಲಾಗುವುದೆಂದು ಸೊರಬದ ತಹಶೀಲ್ದಾರರು ತಿಳಿಸಿದ್ದಾರೆ.