ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಿರುಕುಳ; ವರ್ತಕ ನೇಣಿಗೆ ಶರಣು

Rashmi Kasaragodu
Updated On : 25 Jun 2014, 10:55 am

ಸೊರಬ: ವರ್ತಕರೊಬ್ಬರು ಕುಟುಂಬ ಸದಸ್ಯರ ಕಿರುಕುಳ ತಾಳಲಾರದೆ ನೇಣು ಹಾಕಿಕೊಂಡ ಘಟನೆ ಆನವಟ್ಟಿ ಯಲ್ಲಿ ನಡೆದಿದೆ. ಆನವಟ್ಟಿ ನೆಹರು ನಗರ ನಿವಾಸಿ ಜಾಕೀರ್‌ಸಾಬ್ (51) ಆತ್ಮಹತ್ಯೆ ಮಾಡಿಕೊಂಡವರು. ನನ್ನ ಅಜ್ಜ, ಅಜ್ಜಿ, ಮೊದಲ ಪತ್ನಿ, ಚಿಕ್ಕಮ್ಮ, ಅತ್ತೆ ಇತರರು ನಿತ್ಯ ಕಿರುಕುಳು ನೀಡುತ್ತಿದ್ದು, ಇದರಿಂದ ತಮ್ಮ ತಂದೆ ಬೇಸರಗೊಂಡು ನೇಣಿಗೆ ಶರಣಾಗಿದ್ದಾರೆ ಎಂದು ಆನವಟ್ಟಿ ಠಾಣೆಗೆ ಮೃತ ಜಾಕೀರ್‌ಸಾಬ್ ಪುತ್ರಿ ರೋಷನಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ರವಿಶಂಕರ್ ನಿಧನ
ಹೊಸನಗರ: ತಾಲೂಕಿನ ನಗರ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿಶಂಕರ್ ಮಂಗಳವಾರ ಬೆಳಗ್ಗೆ ನಿಧನರಾದರು. ಅವರಿಗೆ 46 ವರ್ಷವಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನೂಲಿಗ್ಗೇರಿಯ ಅವರ ಮನೆಯ ಹಿಂಭಾಗದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಸಲಾಯಿತು. ಜೆಡಿಎಸ್ ಪ್ರಮುಖರು ಸೇರಿದಂತೆ ಸುತ್ತಮುತ್ತಲಿನ ಗಣ್ಯರು ಅಂತಿಮ ದರ್ಶನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement