ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜುಲೈ 9 ಸೊರಬ ತಾ. 3ನೇ ಸಾಹಿತ್ಯ ಸಮ್ಮೇಳನ

Rashmi Kasaragodu
Updated On : 25 Jun 2014, 10:56 am

ಸೊರಬ: ಇಲ್ಲಿನ ತಾಪಂ ಸಭಾಂಗಣದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ದಿನಾಂಕ ಹಾಗೂ ಅಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಲಾಯಿತು.
ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸಮ್ಮೇಳನದ ಅಧ್ಯಕ್ಷರಾಗಿ ಕುವೆಂಪು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ. ಸಣ್ಣರಾಮಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಜುಲೈ 9 ರಂದು ಪಟ್ಟಣದ ಗುರುಭವನದಲ್ಲಿ ಸಮ್ಮೇಳನ ನಡೆಸುವುದು, ಸಮ್ಮೇಳನದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಕಮ್ಮಟ, ಗೋಷ್ಠಿ ಆಯೋಜಿಸುವ ಹಾಗೂ ಸ್ವಾಗತ ಹಾಗೂ ವಿವಿಧ ಉಪಸಮಿತಿಗಳ ರಚನೆ ಬಗ್ಗೆಯೂ ಚರ್ಚಿಸಲಾಯಿತು. ಸಮ್ಮೇಳನ ಉದ್ಘಾಟನೆಗೆ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಹಾಗೂ ಸಮಾರೋಪದ ಮುಖ್ಯ ಅತಿಥಿಗಳಾಗಿ ಹಾಸ್ಯ ಕಲಾವಿದೆ, ಸಾಹಿತಿ ಇಂದೂಮತಿ ಸಾಲಿಮಠ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.
ತಾ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಪಾಣಿ ವಿವಿಧ ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದರು.
ಸಾಹಿತಿ ನೆಗವಾಡಿ ರಾಜಶೇಖರ ಪಾಟೀಲ್, ಬಿಇಒ ನಾಗರಾಜ, ಯುವ ಕಥೆಗಾರ ರೇವಣಪ್ಪ ಬಿದರಗೇರಿ, ಕಸಾಪ ಮಾಜಿ ಅಧ್ಯಕ್ಷ ಕೃಷ್ಣಾನಂದ್, ಎಸ್.ಆರ್.ಕುಮಾರಸ್ವಾಮಿ, ಕವನಗಾರ್ತಿ ಮುಕ್ತಾಭಟ್, ಆಶಾ ರಂಗನಾಥ, ಶಶಿಕಲಾ, ಚಂದ್ರಪ್ಪ ಅತ್ತಿಕಟ್ಟೆ, ರಾಘವೇಂದ್ರ ಬಾಪಟ್, ಕಾಳಿಂಗರಾಜ್, ಜಿಲ್ಲಾ ಪರಿಷತ್‌ನ ರತ್ನಯ್ಯ, ಚೆನ್ನಯ್ಯ ಸ್ವಾಮಿ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement