ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ದೇವಿ ಬನದ ರಕ್ಷಣೆಗೆ ಪುರಪ್ಪೆಮನೆಯಲ್ಲಿ ಮೌನ ಪ್ರತಿಭಟನೆ

Rashmi Kasaragodu
Updated On : 25 Jun 2014, 10:56 am

ಹೊಸನಗರ: ಕಳೆದ 150 ವರ್ಷಗಳಿಂದ ಪುರಪ್ಪೆಮನೆ ಗ್ರಾಮದ ಸ.ನಂ 164ರಲ್ಲಿ ಇರುವ ಚೌಡಮ್ಮ ದೇವಿ ಬನಕ್ಕೆ ಕೆಲ ನಾಸ್ತಿಕರು ಧಕ್ಕೆ ಉಂಟು ಮಾಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿನ ಸಾಮರಸ್ಯ ಹಾಳಗುತ್ತಿರುವುದಲ್ಲದೆ. ಅದರ ಅರ್ಚನೆ ಮಾಡಿಕೊಂಡು ಬಂದಿರುವ ಕುಟುಂಬಗಳ ಧಾರ್ಮಿಕ ಭಾವನೆಗೆ ನೋವುಂಟಾಗುತ್ತಿದೆ. ಇದನ್ನು ಗಮನಿಸಿ ಬನಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಪುರಪ್ಪೆಮನೆ ಕೆಲ ಗ್ರಾಮಸ್ಥರು ಪಂಚಾಯಿತಿ ಮೂಲಕ ತಹಸೀಲ್ದಾರ್‌ಗೆ ಮನವಿ ನೀಡಿದ್ದಾರೆ.
ಮಂಗಳವಾರ ಪುರಪ್ಪೆಮನೆ ಗ್ರಾಮ ಪಂಚಾಯಿತಿ ಎದುರು ಮೌನ ಪ್ರತಿಭಟನೆ ಕೈಗೊಂಡು ಅವರು ಶಾಲಾ ಸಮಿತಿ ಹೆಸರಲ್ಲಿ ಇಂತಹ ಕೃತ್ಯಕ್ಕೆ ಮುಂದಾಗಿರುವುದು ಬೇಸರ ಉಂಟುಮಮಾಡಿದೆ ಎಂದು ಆರೋಪಿಸಿದರಲ್ಲದೆ ಬನದ ಪಾವಿತ್ರ್ಯ ಉಳಿಸಿಕೊಡುವ ನಿಟ್ಟಿನಲ್ಲಿ ತಕ್ಷಣ ಮಧ್ಯೆ ಪ್ರವೇಶಿಸಿ ನ್ಯಾಯ ಒದಗಿಸಿಕೊಡಬೇಕು ಮತ್ತು ಧಕ್ಕೆ ಉಂಟು ಮಾಡಲು ಹೊರಟಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭ ಎನ್. ನಾರಾಯಣಸ್ವಾಮಿ, ಜಿ.ಕೆ. ರವಿ, ಜಿ.ವಿ. ಸತೀಶ್, ರಾಜಶೇಖರ್, ರಾಘವೇಂದ್ರ, ಎಚ್,ಟಿ. ಕೃಷ್ಣಮೂರ್ತಿ. ಕುಸುಮಾ, ವೀಣಾ, ರೇವತಿ, ವಿಜಯಾ  ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement